ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರದಲ್ಲಿ ಜಡ್ಜ್ ಮನೆಯಲ್ಲಿಯೇ ಕಳ್ಳತನ ಮಾಡಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ರಾಮನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶೆಯ ಮನೆಯಲ್ಲಿ ಕಳ್ಳರು ಕದ್ದಿದ್ದು, ಐಜೂರು ಠಾಣೆಗೆ ದೂರು ನೀಡಲಾಗಿತ್ತು.
ಇದೀಗ ಖದೀಮನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳ್ಳತನ ಮಾಡಿದ ವ್ಯಕ್ತಿ ನ್ಯಾಯಾಧೀಶರ ಕಾರ್ ಡ್ರೈವರ್ ಆಗಿದ್ದ, ಆದ ಹೊಂಚು ಹಾಕಿ ಕಳ್ಳತನ ಮಾಡಿದ್ದು, ಏಳು ಗ್ರಾಂ ಚಿನ್ನ ಹಾಗೂ 30 ಗ್ರಾಂ ಬೆಳ್ಳಿ ಕದ್ದು ಪರಾರಿಯಾಗಿದ್ದ.