ಇಂಗ್ಲೆಂಡ್‌ನಲ್ಲಿ ದೊರಕಿದೆ ಬಂಗಾರದ ನೆಕ್ಲೇಸ್, ಇದರ ವಿಶೇಷತೆ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಷ್ಟೇ ಹಳತಾದರೂ ಬೆಲೆಯಿರೋದು ಚಿನ್ನಕ್ಕೆ ಮಾತ್ರ. ಅದರಲ್ಲಿಯೂ ಹಳೆಯ ಆಭರಣಗಳನ್ನು ಈಗ ಆಂಟಿಕ್ ಪೀಸ್ ಎಂದು ಇಷ್ಟಪಡುವುದುಂಟು. ಆಗಿನ ಕಾಲದ ವಿನ್ಯಾಸ, ಅಭಿರುಚಿಗೆ ಅದರದ್ದೇ ಆದ ಮೌಲ್ಯ ಇದೆ.

ಇದೀಗ ಇಂಗ್ಲೆಂಡ್ ಮ್ಯೂಸಿಯಂ ಆಫ್ ಲಂಡನ್ ಆರ್ಕಿಯಾಲಕಿ ಇತ್ತೀಚೆಗೆ ಪತ್ತೆಯಾದ ಬಂಗಾರದ ನೆಕ್ಲೆಸ್ ಬಗ್ಗೆ ಮಾಹಿತಿ ನೀಡಿದೆ. ಇದರ ವಿಶೇಷತೆ ಏನೆಂದರೆ ಇದು 1,300 ವರ್ಷ ಹಳೆಯದ್ದು. ಹೌದು, 1,300 ವರ್ಷ ಹಳೆಯ ನೆಕ್ಲೆಸ್ ಪತ್ತೆಯಾಗಿದೆ. ಆಂಗ್ಲೋ ಸ್ಯಾಕ್ಸನ್ ಸಮಾಧಿ ಸ್ಥಳದಲ್ಲಿ ಇದು ಪತ್ತೆಯಾಗಿದೆ.

Researchers in England discovered a very rare necklace made of gold and  gemstones that dates back 1,300 yearsಹಳೆಯ ಚಿನ್ನ ಹಾಗೂ ಹರಳುಗಳಿಂದ ಕೂಡಿದ ನೆಕ್ಲೆಸ್ ಇದಾಗಿದೆ. ಬ್ರಿಟನ್‌ನಲ್ಲಿ ದೊರೆತ ಪುರಾತನ ಚಿನ್ನದ ಸರಗಳಲ್ಲಿ ಇದು ಅತ್ಯಂತ ಬೆಲೆಯುಳ್ಳದ್ದಾಗಿದೆ. ಇದೀಗ ಚಿನ್ನದ ಸರದ ಫೋಟೊ ಎಲ್ಲೆಡೆ ವೈರಲ್ ಆಗಿದ್ದು, ಇದೇ ರೀತಿ ಡಿಸೈನ್‌ನ ನೆಕ್ಲೇಸ್ ಮಾಡಿಸೋದಕ್ಕೆ ಯುವ ಪೀಳಿಗೆ ರೆಡಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!