ನವರಾತ್ರಿ ಪ್ರಯುಕ್ತ ದೇವಿಗೆ 8 ಕೋಟಿ ರೂ. ಮೌಲ್ಯದ ನೋಟುಗಳ ಅಲಂಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳ ಮೇಲೆ ಚಿನ್ನದ ಆಭರಣಗಳು ಹೊಸದಲ್ಲ. ಆದರೆ, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ 135 ವರ್ಷಗಳಷ್ಟು ಹಳೆಯದಾದ ವಾಸವಿ ಕನ್ಯಕಾ ಪರಮೇಶ್ವರಿ ದೇವಿಯ ದೇವಾಲಯದಲ್ಲಿ ದೇಗುಲದ ಗೋಡೆಗಳು, ಗರ್ಭಗುಡಿಯೊಳಕ್ಕೆ ₹ 8 ಕೋಟಿ ಮೌಲ್ಯದ ನೋಟುಗಳನ್ನು ಇರಿಸಿ  ದೇವಿಗೆ ನವರಾತ್ರಿ ಅಲಂಕಾರವನ್ನು ಮಾಡಲಾಗಿದೆ.

ಈ ದೇವಾಲಯವು ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿದೆ. ಇಲ್ಲಿನ ಅಧಿ ದೇವತೆ ವಾಸವಿ ಕನ್ಯಕಾ ಅಪಾರ ಭಕ್ತರ ಪಾಲಿಗೆ ಆರಾಧ್ಯ ದೇವಿ. “ಇಲ್ಲಿ ಅಲಂಕಾರಕ್ಕೆ ಬಳಸಲಾಗಿರುವ ಹಣ ಸಾರ್ವಜನಿಕರ ಕೊಡುಗೆಯಾಗಿದ್ದು, ಒಂಬತ್ತು ದಿನಗಳ ಆಚರಣೆ ಮುಗಿದ ನಂತರ ಹಿಂತಿರುಗಿಸಲಾಗುತ್ತದೆ. ಇದು ದೇವಾಲಯದ ಟ್ರಸ್ಟ್‌ಗೆ ಸೇರುವುದಿಲ್ಲ” ಎಂದು ದೇವಾಲಯದ ಸಮಿತಿಯು ತಿಳಿಸಿದೆ.  ನೋಟುಗಳಿಂದ ಮಾಡಿದ ಬಂಟಿಂಗ್ಸ್‍ಗಳನ್ನು ಮರಗಳ ಮೇಲೆ ಮತ್ತು ಸೀಲಿಂಗ್ ಮೇಲೆ ಅಂಟಿಸಿರುವುದನ್ನು ಕಾಣಬಹುದಾಗಿದೆ.
ಅಂದಹಾಗೆ ಈ ದೇವಾಲಯದಲ್ಲಿ ಈ ಹಿಂದೆ ಸುಮಾರು ₹ 5 ಕೋಟಿ ಮೌಲ್ಯದ ಹಣದಿಂದ ಅಲಂಕಾರವನ್ನು ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!