ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ಚಿನ್ನದೊಡವೆಗಳನ್ನ ಖರೀದಿಸಲು ಗ್ರಾಹಕರು ಹಿಂದುಮುಂದು ನೋಡುತ್ತಿದ್ದಾರೆ. ಚಿನ್ನದ ಬೆಲೆ ಗ್ರಾಹಕನ ಜೇಬು ಬಿಸಿ ಮಾಡುತ್ತಿದೆ. ಬೆಲೆ ಯಾವಾಗ ಹೆಚ್ಚಳವಾಗುತ್ತೆ? ಕೆಡಿಮೆ ಆಗುತ್ತೆ ಅನ್ನೋದೇ ಗೊತ್ತಾಗಲ್ಲ. ಚಿನ್ನ ಖರೀದಿಗೂ ಮುನ್ನ ಇಂದಿನ ರೇಟ್ ಹೇಗಿದೆ ಎಂದು ನೋಡೋಣ.
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ ಒಂದು ಗ್ರಾಂಗೆ 7,940 ರೂ, ಚೆನ್ನೈ, ಮುಂಬೈ ಮತ್ತು ಕೊಲ್ಕತ್ತಾ ನಗರಗಳಲ್ಲಿ 7,940 ರೂ, ದೆಹಲಿಯಲ್ಲಿ 7,955 ರೂ. ಆಗಿದೆ. ಪ್ರತಿ ಗ್ರಾಂ 18 ಕ್ಯಾರಟ್ ಚಿನ್ನದ ಬೆಲೆ 6,497 ರೂ. ಆಗಿದ್ದು, 22 ಕ್ಯಾರಟ್ ಚಿನ್ನದ ಬೆಲೆ 7,940 – ರೂ. ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ 8,662 ರೂ ಆಗಿದೆ.
ಬೆಳ್ಳಿಯನ್ನು ಗಮನಿಸುವುದಾದರೆ ಪ್ರತಿ ಕೆಜಿಗೆ 97,000 ರೂ. ಆಗಿದೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಲ್ಲಿ ಕೆಜಿಗೆ 1,05,000 ರೂ. ಆಗಿದ್ದರೆ, ದೆಹಲಿಯಲ್ಲಿ 97,000 ರೂ, ಮುಂಬೈನಲ್ಲಿ 97,000 ರೂ. ಆಗಿದೆ.