ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತವಾಗಿ ಇಳಿಕೆ ಕಂಡು ಖುಷಿಯಾಗಿದ್ದ ಮಧ್ಯಮ ವರ್ಗದ ಜನರಿಗೆ ಈಗ ಶಾಕ್ ಕಾದಿದೆ. ಬುಧವಾರದ ಹೊತ್ತಿಗೆ ಹಳದಿ ಲೋಹ ಮತ್ತೆ ಚೇತರಿಸಿಕೊಂಡಿದ್ದು, ಬೆಲೆ ಗಗನಮುಖಿಯಾಗಿದೆ. ಗ್ರಾಮ್‌ಗೆ ಬರೋಬ್ಬರಿ 600 ರೂ. ಏರಿಕೆಯಾಗುವ ಮೂಲಕ ಚಿನ್ನ ಈಗ ಜನಸಾಮಾನ್ಯರ ಕೈಗೆ ಎಟುಕದಷ್ಟು ದೂರ ಸರಿಯುತ್ತಿದೆ.
22 ಕ್ಯಾರಟ್ (ಆಭರಣ ಚಿನ್ನ): 10 ಗ್ರಾಮ್‌ಗೆ 1,34,450 ರೂ. (ಬೆಂಗಳೂರಿನಲ್ಲಿ)
24 ಕ್ಯಾರಟ್ (ಅಪರಂಜಿ ಚಿನ್ನ): 10 ಗ್ರಾಮ್‌ಗೆ 1,46,670 ರೂ.
ಬೆಳ್ಳಿ ಬೆಲೆ: 100 ಗ್ರಾಮ್‌ಗೆ 25,000 ರೂ. (ಬೆಂಗಳೂರಿನಲ್ಲಿ), ಇತರೆ ರಾಜ್ಯಗಳಲ್ಲಿ 26,000 ರೂ. ವರೆಗೂ ಇದೆ.
ವಿದೇಶಿ ಮಾರುಕಟ್ಟೆಯಲ್ಲಿನ ಏರುಪೇರು ಈ ದಿಢೀರ್ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಬೆಳ್ಳಿ ಕೂಡ ಹಿಂದೆ ಬಿದ್ದಿಲ್ಲ, ಗ್ರಾಮ್‌ಗೆ 15-20 ರೂ. ಜಿಗಿಯುವ ಮೂಲಕ ಬೆಳ್ಳಿ ಪ್ರಿಯರಿಗೂ ಬಿಸಿ ಮುಟ್ಟಿಸಿದೆ.



