October 4, 2026
Sunday, October 4, 2026
spot_img

ಮಳೆರಾಯನ ಎಂಟ್ರಿ ಫಿಕ್ಸ್: ಗಾಳಿ ವೇಗಕ್ಕೆ ಗಡಗಡ ನಡುಗಲಿದೆ ಕರ್ನಾಟಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಪೂರ್ವಮುಂಗಾರು ಅಬ್ಬರಿಸಲಿದೆ ಅಂತ ಹವಾಮಾನ ಇಲಾಖೆ ಫುಲ್ ಅಲರ್ಟ್ ಕೊಟ್ಟಿದೆ. ಬಿಸಿಲ ಬೇಗೆಗೆ ಬೆಂದಿರೋ ಜನರಿಗೆ ತಂಪು ಸಿಗಬಹುದು ನಿಜ, ಆದ್ರೆ ಜೊತೆಗೆ ಬರೋ ಗಾಳಿ-ಮಳೆ ಮಾತ್ರ ಅಷ್ಟೇ ಡೇಂಜರಸ್ ಆಗಿದೆ.

ಗಂಟೆಗೆ ಬರೋಬ್ಬರಿ 40 ರಿಂದ 50 ಕಿ.ಮೀ. ವೇಗದಲ್ಲಿ ಸುಂಟರಗಾಳಿ ಬೀಸುವ ಸಾಧ್ಯತೆಯಿದ್ದು, ಆಲಿಕಲ್ಲು ಮಳೆಯೂ ಬೀಳಲಿದೆಯಂತೆ. ಉತ್ತರ ಕರ್ನಾಟಕದ ಜನರಿಗಂತೂ ಆಲಿಕಲ್ಲು ಮಳೆಯ ಮುನ್ಸೂಚನೆ ಇದೆ.

ಬೆಂಗಳೂರು, ಮೈಸೂರು, ಹಾಸನ, ಕೊಡಗು ಸೇರಿದಂತೆ ಮಲೆನಾಡು ಹಾಗೂ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ ಮತ್ತು ಕಲ್ಬುರ್ಗಿ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿರಲಿದೆ.

Must Read