March 23, 2026
Monday, March 23, 2026
spot_img

Gold Rate | ಯುದ್ಧದ ಪರಿಣಾಮ ಚಿನ್ನ, ಬೆಳ್ಳಿ ದರದಲ್ಲೂ ಕಾಣಿಸ್ತಿದೆ: ಗ್ರಾಮ್​ಗೆ 650 ರೂ. ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ, ವಿಶೇಷವಾಗಿ ಇರಾನ್–ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮ ದೇಶೀಯ ಚಿನ್ನ–ಬೆಳ್ಳಿ ಮಾರುಕಟ್ಟೆಯ ಮೇಲೆ ಸ್ಪಷ್ಟವಾಗಿ ಗೋಚರಿಸಿದೆ. ವಾರದ ಆರಂಭದಲ್ಲಿ ಸಣ್ಣ ಮಟ್ಟಿನ ಏರಿಳಿತ ಕಂಡಿದ್ದ ಬೆಲೆಗಳು ವಾರಾಂತ್ಯದಲ್ಲಿ ತೀವ್ರ ಏರಿಕೆ ದಾಖಲಿಸಿವೆ.

ದೇಶದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,54,630 ರೂಪಾಯಿಗೆ ತಲುಪಿದ್ದು, 24 ಕ್ಯಾರಟ್ ಚಿನ್ನ 1,68,710 ರೂಪಾಯಿಗೆ ಏರಿದೆ. ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ದರ 16,871 ರೂಪಾಯಿ ಆಗಿದೆ. 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ 15,463 ರೂ ಆಗಿದೆ. ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು, ಒಂದು ಗ್ರಾಮ್ 295 ರೂಪಾಯಿ ಮತ್ತು 100 ಗ್ರಾಮ್ 29,500 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ:

ಬೆಂಗಳೂರು ನಗರದಲ್ಲೂ ಇದೇ ದರ ಮುಂದುವರಿದಿದ್ದು, ಚೆನ್ನೈ ಮತ್ತು ಕೇರಳದಲ್ಲಿ ಬೆಳ್ಳಿ ದರ 320 ರೂಪಾಯಿಗೆ ತಲುಪಿದೆ. ಮುಂಬೈ, ದೆಹಲಿ ಹಾಗೂ ಕೋಲ್ಕತಾ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ 15,463 ರಿಂದ 15,478 ರೂಪಾಯಿವರೆಗೆ ಇದೆ.

ವಿದೇಶಗಳಲ್ಲಿಯೂ ಚಿನ್ನದ ದರ ಏರಿಕೆಯಾಗಿದೆ. ಮಲೇಷ್ಯಾ, ದುಬೈ, ಅಮೆರಿಕ ಸೇರಿದಂತೆ ಹಲವೆಡೆ ಬೆಲೆ ಹೆಚ್ಚಳ ಕಂಡುಬಂದಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಜಾಗತಿಕ ಅನಿಶ್ಚಿತತೆ ಮುಂದುವರಿದರೆ ದರದಲ್ಲಿ ಇನ್ನಷ್ಟು ಬದಲಾವಣೆ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !