May 30, 2026
Saturday, May 30, 2026
spot_img

Gold Rates | ಮೂರು ದಿನ ಆಯ್ತು…! ಬಂಗಾರದ ಬೆಲೆ ಆಕಾಶಕ್ಕೆ ಏರುತ್ತಿದೆ: 10 ಗ್ರಾಂಗೆ ಎಷ್ಟು ರೇಟ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನದ ಬೆಲೆಯಲ್ಲಿ ಸತತ ಮೂರನೇ ದಿನವೂ ಏರಿಕೆ ದಾಖಲಾಗಿದ್ದು, ಗುರುವಾರ 20 ರೂ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ 265 ರೂ ಹೆಚ್ಚಳ ಕಂಡಿದ್ದ ಬಂಗಾರದ ದರ ಇಂದು ಮತ್ತಷ್ಟು ದುಬಾರಿಯಾಗಿರುವುದು ಖರೀದಿದಾರರ ಗಮನ ಸೆಳೆದಿದೆ. ಇದೇ ವೇಳೆ ಬೆಳ್ಳಿ ಬೆಲೆ ಮಾತ್ರ ನಿನ್ನೆ ಏರಿಕೆಯಾದ ನಂತರ ಇಂದು ಸ್ಥಿರವಾಗಿದೆ.

ಪ್ರಸ್ತುತ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,42,600 ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನದ 10 ಗ್ರಾಂ ದರ ₹1,55,570 ಆಗಿದೆ. ಒಂದು ಗ್ರಾಂ ಮಟ್ಟದಲ್ಲಿ ನೋಡಿದರೆ, 22 ಕ್ಯಾರಟ್ ಚಿನ್ನ ₹14,260 ಮತ್ತು 24 ಕ್ಯಾರಟ್ ಚಿನ್ನ ₹15,557 ದರದಲ್ಲಿ ಲಭ್ಯವಾಗಿದೆ. ಬೆಳ್ಳಿ ದರ ಪ್ರತಿ ಗ್ರಾಂಗೆ ₹270 ಇದ್ದು, 100 ಗ್ರಾಂಗೆ ₹27,000 ಆಗಿದೆ.

ಇದನ್ನೂ ಓದಿ:

ಜಾಗತಿಕ ಮಾರುಕಟ್ಟೆಯ ಚಲನವಲನ, ಡಾಲರ್ ಬಲ, ಮಧ್ಯಪ್ರಾಚ್ಯ ಉದ್ವಿಗ್ನತೆ ಹಾಗೂ ಹೂಡಿಕೆದಾರರ ಸುರಕ್ಷಿತ ಆಸ್ತಿ ಬೇಡಿಕೆಯ ಪರಿಣಾಮವಾಗಿ ಚಿನ್ನದ ದರ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆ ವಲಯ ತಿಳಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಮದುವೆ ಸೀಸನ್ ಬೇಡಿಕೆ ಹಿನ್ನೆಲೆ ಬೆಲೆಯಲ್ಲಿ ಇನ್ನಷ್ಟು ಚಲನವಲನ ಕಂಡುಬರುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !