ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ನಟಿ ರನ್ಯಾ ರಾವ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇತ್ತ ಸ್ಪೋಟಕ ಮಾಹಿತಿಗಳು ಒಂದರಂತೆ ಒಂದು ಹೊರಬರುತ್ತಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರೆಸ್ಟ್ ಮಾಡಿದ್ದ ಬಳ್ಳಾರಿ ಮೂಲದ ಸಾಹಿಲ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.
ರನ್ಯಾರಾವ್ ಕಳೆದ ಮೂರೇ ಮೂರು ತಿಂಗಳಲ್ಲಿ ದುಬೈ ನಿಂದ 49.6 ಕೆಜಿ ಚಿನ್ನ ತಂದಿದ್ದಾಳೆ ಎಂದು ಡಿ ಆರ್ ಐ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ. ಮೂರೇ ತಿಂಗಳಲ್ಲಿ ಬರೋಬ್ಬರಿ 49.6 ಕೆ.ಜಿನ ಸಾಗಾಟ ಮಾಡಲಾಗಿದ್ದು ಬೆಂಗಳೂರಿಗೆ ರನ್ಯಾರಾವ್ 49.6 ಕೆಜಿ ಚಿನ್ನ ಸಾಗಿಸಿದ್ದಾಳೆ.
ಕಳೆದ ನವೆಂಬರ್ ತಿಂಗಳಿನಿಂದಲೇ ಬರೋಬ್ಬರಿ 50 ಕೆಜಿ ಚಿನ್ನ ತಂದು ತನಗೆ ಕೊಟ್ಟಿರುವುದಾಗಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ 3ನೇ ಆರೋಪಿ ಸಾಹಿಲ್ ಜೈನ್ ಡಿಆರ್‌ಐ ಮುಂದೆ ಬಾಯ್ಬಿಟ್ಟಿದ್ದಾನೆ.
ಈ ಚಿನ್ನವನ್ನ ಸಾಹಿಲ್ ಮಾರಾಟ ಮಾಡಿಕೊಡುವ ಕೆಲಸ ಮಾಡಿದ್ದ. ಅಷ್ಟೇ ಅಲ್ಲ ರನ್ಯಾ ರಾವ್ 30 ಕೋಟಿ ರೂ. ಹಣವನ್ನು ಹವಾಲಾ ಮೂಲಕ ದುಬೈಗೆ ಸಾಗಾಟ ಮಾಡಲಾಗಿತ್ತು ಎಂದು ಸಾಹಿಲ್ ಜೈನ್ ಡಿಆರ್‌ಐ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. ಡಿಆರ್‌ಐ ಅಧಿಕಾರಿಗಳು ಕೋರ್ಟ್ ಮುಂದೆ ತನಿಖೆಯ ಮಾಹಿತಿ ಹಂಚಿಕೊಂಡಿದ್ದಾರೆ.