ಹೊಸದಿಗಂತ ಡಿಜಿಟಲ್ ಡೆಸ್ಕ್:
10 ಗ್ರಾಂ ಚಿನ್ನದ ಬೆಲೆ ಈಗ 90,000 ರೂಪಾಯಿ ಆಗಿದ್ದು, ಭವಿಷ್ಯದಲ್ಲಿ 56,000 ರೂಪಾಯಿಗೆ ಇಳಿಯುತ್ತಾ? ಎನ್ನುವ ಚರ್ಚೆ ಎಲ್ಲೆಡೆ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಅಮೆರಿಕ ತಜ್ಞರು ಈ ಕುರಿತು ಸೂಚನೆಯೊಂದನ್ನು ನೀಡಿದ್ದಾರೆ.
ಒಂದು ತೊಲ ಚಿನ್ನ ಕೇವಲ 34,000 ರೂಪಾಯಿಗಳಿಗೆ ಸಿಗಲಿದೆ ಎಂದು ಅಮೆರಿಕ ತಜ್ಞರು ವಾದ ಮುಂದಿಟ್ಟಿದ್ದಾರೆ. ಇದಕ್ಕೆ ಅವರ ನೀಡಿದ ಪ್ರಮಖ ಕಾರಣ ಜಾಗತಿಕ ದಾಸ್ತಾನು 9% ರಷ್ಟು ಏರಿಕೆಯಾಗಿದೆ. ಇದರಿಂದ ದಾಸ್ತಾನು 2,16,265 ಟನ್‌ಗಳಿಗೆ ತಲುಪಿದೆ ಎಂದಿದ್ದಾರೆ.
ವಿಶ್ವ ಕೇಂದ್ರ ಬ್ಯಾಂಕುಗಳಿಂದ ಚಿನ್ನ ಖರೀದಿ ಕಡಿಮೆಯಾಗುವ ನಿರೀಕ್ಷೆಯಿದೆ. 71% ಕೇಂದ್ರ ಬ್ಯಾಂಕುಗಳು ತಮ್ಮ ಚಿನ್ನದ ಮೀಸಲುಗಳನ್ನು ಕಡಿಮೆ ಮಾಡಲು ಅಥವಾ ನಿರ್ವಹಿಸಲು ಯೋಜಿಸುತ್ತಿವೆ. ಇದೂ ಕೂಡ ಚಿನ್ನದ ಬೆಲೆ ಇಳಿಕೆ ಕಾರಣವಾಗಿದೆ ಎಂದು ಸೂಚಿಸಿದ್ದಾರೆ.’