ಹೊಸದಿಗಂತ ವರದಿ, ಮಂಗಳೂರು:
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟದ ಪ್ರಕರಣಗಳು ಆಗಾಗ ಪತ್ತೆಯಾಗುತ್ತಲೇ ಇವೆ. ಜೂ.22ರಂದು ತೆರಿಗೆ ವಂಚಿಸಿ ಸಾಗಾಟ ಮಾಡುತ್ತಿದ್ದ ರೂ.19 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರೆ, ಜೂ.26ರಂದು ರೂ.60 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದುಬೈಯಿಂದ ಇಂಡಿಗೋ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇರಳ ಕಾಸರಗೋಡಿನ ಪ್ರಯಾಣಿಕನೊಬ್ಬನನ್ನು ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೊಳಪಡಿಸಿದಾಗ ಆತನ ಬಳಿ ರೂ.60,24,340 ಮೌಲ್ಯದ 1163 ಗ್ರಾಂ ಚಿನ್ನ ಪತ್ತೆಯಾಗಿದೆ. ಆರೋಪಿ ಚಿನ್ನವನ್ನು ಪೇಸ್ಟ್ ರೂಪಕ್ಕೆ ಬದಲಾಯಿಸಿ ಅದನ್ನು ಕ್ಯಾಪ್ಸುಲ್‌ನಂತೆ ಮಾಡಿ ಅನುಮಾನ ಬಾರದಂತೆ ಸಾಗಾಟ ಮಾಡುತ್ತಿದ್ದು, ತಪಾಸಣೆ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.