ಗೋಲ್ಡನ್ ಜುಬಿಲಿ: 50ನೇ ವಸಂತಕ್ಕೆ ಕಾಲಿಟ್ಟ ಬಂಡೀಪುರ ಅರಣ್ಯ, ದೇಶದ ಮೊದಲ ಹುಲಿ ರಕ್ಷಿತಾರಣ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಮೊದಲ ಹುಲಿ ರಕ್ಷಿತಾರಣ್ಯ ಬಂಡೀಪುರ ಅರಣ್ಯಕ್ಕೆ ಇದೀಗ 50 ವರ್ಷಗಳ ಸಂಭ್ರಮ. ಮೊದಲು ಈ ಅರಣ್ಯದಲ್ಲಿ ಕೇವಲ 13 ಹುಲಿಗಳಷ್ಟೇ ಇದ್ದವು, ಆದರೆ ಹುಲಿಗಳ ಸಂಖ್ಯೆ ಇದೀಗ ಗಣನೀಯ ಏರಿಕೆ ಕಂಡಿದೆ. ಪ್ರಸ್ತುತ ಬಂಡೀಪುರ ಅರಣ್ಯದಲ್ಲಿ 140ಕ್ಕೂ ಹೆಚ್ಚು ಹುಲಿಗಳಿವೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ೫೦ನೇ ವಸಂತಕ್ಕೆ ಕಾಲಿಟ್ಟು ಗೋಲ್ಡನ್ ಜುಬಿಲಿ ಆಚರಿಸುತ್ತಿದೆ. 1973ರಲ್ಲಿ ಭಾರತದ ಮೊದಲ ಹುಲಿ ರಕ್ಷಿತಾರಣ್ಯ ಎಂದು ಬಂಡೀಪುರವನ್ನು ಘೋಷಣೆ ಮಾಡಲಾಯಿತು.

ಮೊದಲು 1,200 ಚದರ ಕಿ.ಮೀ ವ್ಯಾಪ್ತಿಯಲ್ಲಿದ್ದ ಅರಣ್ಯದಲ್ಲಿ 10ರಿಂದ 13 ಹುಲಿಗಳು ಇದ್ದವು. ಇವುಗಳ ಬೇಟೆಗೆ ಇರುವ ಪ್ರಾಣಿಗಳ ಸಂಖ್ಯೆಯೂ ಕಡಿಮೆಯಿತ್ತು. ಆದರೆ ಈಗ ಉತ್ತಮ ಸಂರಕ್ಷಣೆಯ ಕಾರಣ 140ಕ್ಕೂ ಹೆಚ್ಚು ಹುಲಿಗಳು ಅರಣ್ಯದಲ್ಲಿವೆ. ಅವುಗಳಿಗೆ ಬೇಟೆಯಾಡಲು ಬೇಕಾದ ಬೇಟೆ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇಷ್ಟೊಂದು ಹುಲಿಗಳು ಇರುವ ಬಂಡೀಪುರ ಅರಣ್ಯದಿಂದ ಚಾಮರಾಜನಗರವನ್ನು ಹುಲಿಗಳ ನಾಡು ಎನ್ನಲಾಗುತ್ತದೆ ಎಂದು ಬಂಡೀಪುರ ಸಿಎಫ್‌ಒ ರಮೇಶ್ ಕುಮಾರ್ ಹೇಳಿದ್ದಾರೆ.

bandipur-tiger-reserve - South Tourism Blogಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ವನ್ಯಜೀವಿ ಪ್ರೇಮಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಂಡೀಪುರಕ್ಕೆ ಹೆಚ್ಚು ಮಂದಿ ಪ್ರವಾಸಿಗರು ಬರುತ್ತಿದ್ದಾರೆ. ವಿದೇಶಿ ಪ್ರವಾಸಿಗರೂ ಸಫಾರಿ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಬಂಡೀಪುರ ಹುಲಿ ರಕ್ಷಿತಾರಣ್ಯವಾಗಿ 50 ವರ್ಷ ಕಳೆದದ್ದು ದೇಶಕ್ಕೇ ಹೆಮ್ಮೆಯ ವಿಚಾರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!