ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಬಿಸಿಗಾಳಿಯ ಪ್ರಭಾವ ತಗ್ಗಿದ್ದು, ರಾಜಸ್ಥಾನದ ಪಶ್ಚಿಮ ಭಾಗ ಹಾಗೂ ಕೇರಳ ಹೊರತುಪಡಿಸಿ ಇತರ ಕಡೆಗಳಲ್ಲಿ ಇದು ಸಂಪೂರ್ಣ ಅಂತ್ಯವಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಬಂಗಾಳ ಕೊಲ್ಲಿಯಿಂದ ದೇಶದೊಳಗೆ ತೇವಾಂಶ ಭರಿತ ಗಾಳಿ ಬೀಸಲು ಆರಂಭವಾಗಿದ್ದು, ಸದ್ಯ ಆತಂಕ ದೂರವಾಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿ ಸೋಮಾ ಸೇನ್ ಮಾಹಿತಿ ನೀಡಿದ್ದಾರೆ.
ಈ ಬಾರಿ ಕಂಡುಕೇಳರಿಯದಂತೆ ಬಿಸಿಗಾಳಿ ದೇಶವನ್ನು ತಲ್ಲಣಗೊಳಿಸಿದೆ. ಹಲವು ರಾಜ್ಯಗಳಲ್ಲಿ ಜನತೆ ಇದರ ಪ್ರಭಾವದಿಂದ ತತ್ತರಿಸಿಹೋಗಿದ್ದರು. ಕೇರಳದಲ್ಲಂತೂ ಕೆಲವು ಜೀವಬಲಿ ಕೂಡಾ ಸಂಭವಿಸಿತ್ತು.