ಸಾಮಾಗ್ರಿಗಳು
ಸೋಯಾ
ಈರುಳ್ಳಿ
ಟೊಮ್ಯಾಟೊ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸು
ಖಾರದಪುಡಿ
ಗರಂ ಮಸಾಲಾ
ಮೆಣಸು ಕಾಳು ಪುಡಿ
ಸಾಂಬಾರ್ ಪುಡಿ
ಬೇಯಿಸಿದ ರೈಸ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ಬಾಡಿಸಿ
ನಂತರ ಅದಕ್ಕೆ ಹಸಿಮೆಣಸು, ಈರುಳ್ಳಿ ಹಾಕಿ ಬಾಡಿಸಿ, ಜೊತೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಉಪ್ಪು ಹಾಕಿ, ಟೊಮ್ಯಾಟೊ ಹಾಕಿ ಅರಿಶಿಣ ಪುಡಿ ಹಾಕಿ
ನಂತರ ಖಾರದಪುಡಿ ಗರಂ ಮಸಾಲಾ ಹಾಕಿ
ನಂತರ ಬೇಯಿಸಿದ ಸೋಯಾ ಪೀಸ್ಗಳನ್ನು ಹಾಕಿ
ನಂತರ ಸಣ್ಣ ಉರಿಯಲ್ಲಿ ಬಾಡಿಸಿ, ಕೊತ್ತಂಬರಿ ಹಾಕಿ
ನಂತರ ಬೇಯಿಸಿದ ಅನ್ನ ಹಾಕಿದ್ರೆ ಸೋಯಾ ರೈಸ್ ರೆಡಿ