ಎಲ್ಲಿ ಸ್ವಾಮಿ ನಮ್ಮ ಹಣ 2 ತಿಂಗಳಾದ್ರು ಬರ್ತಿಲ್ಲಾ? ಸರ್ಕಾರದ ವಿರುದ್ಧ ‘ಗೃಹಲಕ್ಷ್ಮಿ’ಯರ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಸಿಗದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು, ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಬರದ ಕಾರಣ ಗೃಹಲಕ್ಷ್ಮಿ ಹಣ ಬರುತ್ತದೆ ಎಂದು ನಿರೀಕ್ಷಿಸಿದ್ದೆವು, ಹಣವಿಲ್ಲದೇ ನಾನಾ ಸಮಸ್ಯೆಗಳು ಎದುರಾಗಿವೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ. ಗ್ಯಾರಂಟಿ ವ್ಯವಸ್ಥೆಯಿಂದಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ನೀಡಿದ್ದರೂ ಕೆಲವರಿಗೆ ಹಣ ಬಂದಿಲ್ಲ. ಇದುವರೆಗೂ ದುಡ್ಡು ಬಾರದೇ ಇದ್ದ ಫಲಾನುಭವಿಗೆ ಹಣ ವಿತರಿಸುವ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತಿದ್ದು, ಎರಡು ತಿಂಗಳಿಂದ ನಮಗೆ ಹಣ ಬಂದಿಲ್ಲ ಎಂದು ಮಹಿಳೆಯರು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

6 COMMENTS

 1. ಗೃಹಲಕ್ಷ್ಮಿ ಹಣ ನಂಬಿ ತುಂಬಾ ಕಮಿಟ್ಮೆಂಟ್ ಮಾಡಿಕೊಂಡಿ ಇದ್ವಿ ಎಲ್ಲಾ ವೇಸ್ಟ್ ಆಯ್ತು

 2. ಕೊಟ್ಟ ಮಾತಿಗೆ ಮಾತು
  ಬಡವರಿಗೆ ಬಂತು ಕಣ್ಣೀರು
  ಕಾರಣ ಒಂದು ಸಾರಿ ರುಚಿ ತೋರಿಸಿ ಜನರು…..
  ಸರ್ಕಾರದ ಕೆಲಸ ದೇವರ ಕೆಲಸ ಸುಳ್ಳು
  ನನಗಾಗಿ ನನಗೋಸ್ಕರ ನನ್ನ ಬೆಳವಣಿಗೆಗೆ ಈ ಆಸೆ ಸಾಯಬೇಕು ನಂತರ ನಿಮಗಾಗಿ ನಿಮಗೋಸ್ಕರ ನಿಮ್ಮ
  ಬಡವರ ಧ್ವನಿ ಕೇಳುತ್ತದೆ ಸರ್ಕಾರಕ್ಕೆ…..

 3. ಎಲ್ಲಾ ಹೆಣ್ಣುಮಕ್ಕಳು ಇದೆ ಕಾರಣಕ್ಕೆ ಹೋಟ್ ಹಾಕಿದ್ದು ಇವರು ಹೀಗೆ ಮೋಸ ಮಾಡಿದ್ರೆ ರಾಜೀನಾಮೆ ಕೊಡಲಿ

LEAVE A REPLY

Please enter your comment!
Please enter your name here

error: Content is protected !!