ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಪ್ರಯಾಣಿಕರಿಗೆ ಮೋದಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಏರ್‌ಪೋರ್ಟ್‌ನಲ್ಲಿ ‘ಜನತಾ ಖಾನಾ’ ಅಂದರೆ ಜನರ ಊಟ ಶೈಲಿಯ ಉಡಾನ್ ಯಾತ್ರಿ ಕೆಫೆ ಆರಂಭ ಮಾಡಿದೆ.
ವಿಮಾನ ನಿಲ್ದಾಣದಲ್ಲಿ ಒಂದು ಮಸಾಲೆ ದೋಸೆಗೆ 300 ರೂಪಾಯಿ ಒಂದು ಸಣ್ಣ ಸಮೋಸಾಕ್ಕೆ 120 ರೂಪಾಯಿ ಇರೋ ಬಿಲ್‌ಗಳನ್ನು ನೋಡಿ ಅಚ್ಚರಿಪಟ್ಟಿರುತ್ತೇವೆ.ಆದರೆ, ಇದು ಪ್ರಯಾಣಿಕರಿಗೆ ಅನುಕೂಲವಾಗಿರೋದಿಲ್ಲ.ಹೀಗಾಗಿ ಪ್ರಯಾಣದ ಸಮಯದಲ್ಲಿ ಬಜೆಟ್ ಸ್ನೇಹಿ ಹಾಗೂ ಆರೋಗ್ಯಕರ ಆಹಾರ ಆಯ್ಕೆಯನ್ನು ಹುಡುಕುತ್ತಿದ್ದವರಿಗೆ ವರವಾಗಿ ಉಡಾನ್ ಯಾತ್ರಿ ಕೆಫೆ ಆರಂಭವಾಗಿದೆ.
ನಾಗರೀಕ ವಿಮಾನಯಾನ ಸಚಿವಾಲಯ, ಪ್ರಯಾಣಿಕರು ಬಜೆಟ್ ಸ್ನೇಹಿ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಪಡೆಯಲು ಸಾಧ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ವಿಮಾನ ನಿಲ್ದಾಣಗಳಲ್ಲಿ ‘UDAN ಯಾತ್ರಿ ಕೆಫೆ’ ಆರಂಭ ಮಾಡಿದೆ. ಇದು ಪ್ರಯಾಣಿಕರ ಪ್ರಯಾಣದ ಅನುಭವವನ್ನು ಹೆಚ್ಚಿಸುವುದಲ್ಲದೆ ದೇಶದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ.
ಈಗಾಗಲೇ ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಇದು ಆರಂಭವಾಗಿಲ್ಲ. ವಿಮಾನಯಾನ ಸಚಿವಾಲಯ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ UDAN ಯಾತ್ರಿ ಕೆಫೆಯನ್ನು ಪ್ರಾಯೋಗಿಕವಾಗಿ ಆರಂಭ ಮಾಡಿದ್ದು, ಶೀಘ್ರದಲ್ಲೇ ಇದನ್ನು ದೇಶದ ಇತರ ವಿಮಾನ ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತದೆ.
ಕೆಫೆಯಲ್ಲಿನ ಮೆನ್ಯು ಏನು, ದರ ಎಷ್ಟು?:
ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ‘UDAN ಯಾತ್ರಿ ಕೆಫೆ’ ಯೋಜನೆಯು ರೈಲ್ವೆ ನಿಲ್ದಾಣಗಳಂತೆ ಕೈಗೆಟುಕುವ ಬೆಲೆಯಲ್ಲಿ ನೀರಿನ ಬಾಟಲಿಗಳು, ಚಹಾ, ಕಾಫಿ ಮತ್ತು ತಿಂಡಿಗಳಂತಹ ಅಗತ್ಯ ವಸ್ತುಗಳನ್ನು ನೀಡುತ್ತದೆ. ವಿಮಾನ ನಿಲ್ದಾಣದಲ್ಲೂ ಈಗ ನೀರಿನ ಬಾಟಲ್‌ಅನ್ನು 10 ರೂಪಾಯಿಯಲ್ಲಿ ಖರೀದಿ ಮಾಡಬಹುದಾಗಿದೆ. ಕ್ರಮವಾಗಿ 10 ಹಾಗೂ 20 ರೂಪಾಯಿಗಳಲ್ಲಿ ಚಹಾ-ಕಾಫಿ ಸೇವಿಸಬಹುದು. ಜತೆಗೆ ಸಮೋಸಾ (1 ಪೀಸ್) 20 ರೂಪಾಯಿ ಆಗಿದ್ದರೆ. ಸ್ವೀಟ್ ಆಫ್ ಡೇ 20 ರೂಪಾಯಿ ಆಗಿದೆ.