ಏರ್‌ಟೆಲ್‌ ಗ್ರಾಹಕರಿಗೆ ಗುಡ್‌ ನ್ಯೂಸ್:‌ ಹೊಸ ʼಫ್ಯಾಮಿಲಿ ಪ್ಲಾನ್‌ʼ ಘೋಷಿಸಿದ ಕಂಪನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಪ್ರಮುಖ ನೆಟ್ವರ್ಕ್‌ ಪೂರೈಕೆದಾರರಾದ ಭಾರ್ತಿ ಏರ್‌ಟೆಲ್‌ ಹಾಗು ರಿಲಯನ್ಸ್‌ ಜಿಯೋಗಳು ಈಗಾಗಲೇ ದೇಶದಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸಿದ್ದು ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಲು ಹೊಸ ಹೊಸ ಕಸರತ್ತುಗಳನ್ನು ನಡೆಸುತ್ತಿವೆ. ಇತ್ತೀಚೆಗಷ್ಟೇ ಜಿಯೋ ಆಕರ್ಷಕ ಬೆಲೆಯಲ್ಲಿ ಹೊಸ ಪೋಸ್ಟ್‌ ಪೇಯ್ಡ್‌ ಯೋಜನೆಗಳನ್ನು ಹೊರತಂದಿದೆ. ಇದೀಗ ಭಾರ್ತಿ ಏರ್ ಟೆಲ್‌ ಕೂಡ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು ಪೋಸ್ಟ್‌ಪೇಯ್ಡ್ ಕುಟುಂಬ ಯೋಜನೆಗಳಿಗೆ ಪ್ರವೇಶ ಮಟ್ಟದ ಸುಂಕಗಳನ್ನು ಕಡಿಮೆ ಮಾಡಿದೆ, ₹599 ಯೋಜನೆಯನ್ನು ಪರಿಚಯಿಸಿದ್ದು ₹799 ಮತ್ತು ₹998 ಬೆಲೆಯ ಇತರ ಎರಡು ಆಯ್ಕೆಗಳೂ ಲಭ್ಯವಿದೆ. ಈ ಯೋಜನೆಗಳು ಕಂಪನಿಯ ಏರ್‌ಟೆಲ್ ಬ್ಲಾಕ್ ಪ್ಯಾಕೇಜ್‌ನ ಭಾಗವಾಗಿದೆ.

ಭಾರ್ತಿ ಏರ್‌ಟೆಲ್‌ನ ಇತ್ತೀಚೆಗೆ ಪರಿಚಯಿಸಿದ ಎಲ್ಲಾ ಪೋಸ್ಟ್‌ಪೇಯ್ಡ್ ಯೋಜನೆಗಳು Amazon Prime, Disney+Hotstar ಸೇರಿದಂತೆ ಕೆಲ OTT ಗಳು ಹಾಗು Airtel Xstream ಚಂದಾದಾರಿಕೆಯನ್ನು ಒಳಗೊಂಡಿದೆ. ಇದರ ಜೊತೆ ₹799 ಮತ್ತು ₹998 ಯೋಜನೆಗಳು ಕ್ರಮವಾಗಿ ಡೈರೆಕ್ಟ್-ಟು-ಹೋಮ್ (DTH) ಸೇವೆಗಳು ಮತ್ತು ಬ್ರಾಡ್‌ಬ್ಯಾಂಡ್ ಯೋಜನೆಗಳಂತಹ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!