ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀಮಿಯಂ ವಿಸ್ಕಿ ಮತ್ತು ಸ್ಕಾಚ್ ಬೆಲೆಯನ್ನು ನಿನ್ನೆಯಿಂದ (ಆಗಸ್ಟ್ 27) ದರ ಇಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸ್ಕಾಚ್ ಬೆಲೆ ಈ ಮಟ್ಟಿಗೆ ಕುಸಿದಿರುವುದು ಇತಿಹಾಸದಲ್ಲಿ ಇದೇ ಮೊದಲು.
ಮದ್ಯದಲ್ಲಿ 16 ಸ್ಲ್ಯಾಬ್ಗಳಿವೆ. ಅದರಲ್ಲಿ ಒಂದರಿಂದ ಐದು ಸ್ಲ್ಯಾಬ್ಗಳ ವರೆಗೆ ಮದ್ಯದ ದರವನ್ನು ಕಡಿಮೆ ಮಾಡಿಲ್ಲ. ಪ್ರೀಮಿಯಂ ಮದ್ಯವನ್ನು ರಾಜ್ಯದಲ್ಲಿ ಶೇ- 40% ರಷ್ಟು ಮದ್ಯಪ್ರಿಯರು ಕುಡಿಯುತ್ತಾರೆ. ಆರರಿಂದ ಹದಿನಾರರವರೆಗೆ ಬರುವ ಎಲ್ಲಾ ಮಾದರಿಯ ಮದ್ಯದ ದರವನ್ನು ಕಡಿಮೆ ಮಾಡಲಾಗ್ತಿದೆ.
ನೆರೆಯ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುರ್ಗಾವ್ ಮತ್ತು ದೆಹಲಿಯಲ್ಲಿ ನಮ್ಮ ರಾಜ್ಯದಲ್ಲಿ 3000ಗೆ ಮಾರಾಟವಾಗುವ ಮದ್ಯ ಕೇವಲ 900 ರೂ.ಗೆ ಲಭ್ಯವಿದೆ. ಇದರಿಂದಾಗಿ ರಾಜ್ಯದ ಉನ್ನತ ಮಟ್ಟದ ಮದ್ಯವ್ಯಸನಿಗಳು ವಿವಿಧ ರಾಜ್ಯಗಳ ಮದ್ಯವನ್ನು ಅವಲಂಬಿಸಿದ್ದಾರೆ.
ಇದರಿಂದ ರಾಜ್ಯ ಸರ್ಕಾರಕ್ಕೆ ಸುಮಾರು 2,500 ರಿಂದ 3 ಸಾವಿರ ಕೋಟಿಯಷ್ಟು ನಷ್ಟ ಆಗ್ತಿತ್ತು. ಇಂದಿನಿಂದ ದರ ಇಳಿಕೆ ಆಗ್ತಿರೋದ್ರಿಂದ ಆದಾಯ ಹೆಚ್ಚಾಗಲಿದೆ.
ರಾಜ್ಯ ಸರ್ಕಾರ ಕ್ಲಾಸ್ ಪೀಪಲ್ಸ್ ಕುಡಿಯುವ ಮದ್ಯದ ದರವನ್ನು ಇಳಿಕೆ ಮಾಡಿದ್ರೆ ಇತ್ತ ಮಧ್ಯಮ ವರ್ಗದ ಜನರು ಕುಡಿಯುವ ಪ್ರತಿ ಬಿಯರ್ ಮೇಲೆ 5 ರಿಂದ 30 ರುಪಾಯಿ ವರೆಗೂ ಹೆಚ್ಚಳ ಮಾಡಿದೆ. ಈ ಹಿಂದೆ 100 ರುಪಾಯಿ ಇದ್ದ ಬಿಯರ್ ಈಗ 120 ರುಪಾಯಿ. 120 ರುಪಾಯಿ ಇದ್ದ ಬಿಯರ್ 150 ರುಪಾಯಿ. 130 ರುಪಾಯಿ ಇದ್ದ ಬಿಯರ್ ಬೆಲೆ 150 ರುಪಾಯಿ ವರೆಗೆ ಏರಿಕೆ ಮಾಡಲಾಗಿದೆ.