Monday, August 8, 2022

Latest Posts

ಬಿಜೆಪಿ ಮುಖಂಡರಿಗೆ ಗುಡ್ ನ್ಯೂಸ್ : ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವಾರಗಳ ಹಿಂದೆ 22 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಮಾಡಲಾಗಿತ್ತು. ಇದೀಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ ಯಾರಿಗೆ ಯಾವ ನಿಗಮದ ಅಧ್ಯಕ್ಷರ ನೇಮಕಾತಿಯನ್ನು ನೀಡಲಾಗಿದೆ ಎನ್ನುವುದರ ವಿವರ ಇಲ್ಲಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ -ಕೆ.ವಿ. ನಾಗರಾಜ

ಕರಕುಶಲ ಅಭಿವೃದ್ಧಿ ನಿಗಮ -ಮಾರುತಿ ಮಲ್ಲಪ್ಪ ಅಷ್ಟಗಿ

ಕಾಡಾ -ತುಂಗಭದ್ರಾ ಯೋಜನೆ -ಕೊಲ್ಲಾಶೇಷಗಿರಿ ರಾವ್

ಕಾಡಾ -ಕಾವೇರಿ ಜಲಾನಯನ ಯೋಜನೆ -ಜಿ ನಿಜಗುಣರಾಜು

ಮದ್ಯಪಾನ ಸಂಯಮ ಮಂಡಳಿ -ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ -ಎಂ. ಶರವಣ

ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ -ದೇವೇಂದ್ರನಾಥ್

ಕಾಡುಗೊಲ್ಲ ಅಭಿವೃದ್ಧಿ ನಿಗಮ -ಚಂಗಾವರ ಮಾರಣ್ಣ

ರಾಜ್ಯ ಮಾವು ಅಭಿವೃದ್ಧಿ ನಿಗಮ -ಎಂ.ಕೆ. ವಾಸುದೇವ

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ -ಎಂ.ಕೆ. ಶ್ರೀನಿವಾಸ್

ದ್ರಾಕ್ಷಿ ಮತ್ತು ವೈನ್ ಬೋರ್ಡ್ -ಎಂ. ರವಿನಾರಾಯಣ ರೆಡ್ಡಿ

ರೇಷ್ಮೆ ಮಾರಾಟ ಮಂಡಳಿ -ಬಿ.ಸಿ. ನಾರಾಯಣಸ್ವಾಮಿ

ಲಿಂಬೆ ಅಭಿವೃದ್ಧಿ ಮಂಡಳಿ -ಚಂದ್ರಶೇಖರ ಕವಟಗಿ

ರಾಜ್ಯ ಗೇರು ಅಭಿವೃದ್ಧಿ ನಿಗಮ -ಮಣಿರಾಜ ಶೆಟ್ಟಿ

ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ -ಗೋವಿಂದ ಜಟ್ಟಪ್ಪ ನಾಯಕ

ಮೈಸೂರು ಮೃಗಾಲಯ ಪ್ರಾಧಿಕಾರ -ಎಂ. ಶಿವಕುಮಾರ್

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ – ಎನ್. ರೇವಣಪ್ಪ ಕೊಳಗಿ

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ- ಕೆ.ಪಿ. ವೆಂಕಟೇಶ್

ಹಿಂದೆ ನಿಗಮಗಳ ಅಧ್ಯಕ್ಷರಾಗಿದ್ದ ರಘು ಕೌಟಿಲ್ಯ ಮತ್ತು ಮಣಿರಾಜ ಶೆಟ್ಟಿ ಅವರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss