ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್:‌ 4 ಶೇ. ಡಿಎ ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜನವರಿ 1, 2023 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಅಥವಾ ಡಿಎಯನ್ನು ಸರ್ಕಾರವು ಶೇಕಡಾ 4 ರಿಂದ 42 ರಷ್ಟು ಹೆಚ್ಚಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ಘೋಷಿಸಿದ್ದಾರೆ.

ಈ ಹೆಚ್ಚಳಕ್ಕೆ ಶುಕ್ರವಾರ ಕ್ಯಾಬಿನೆಟ್ ಅನುಮೋದನೆ ನೀಡಿದ್ದು ಹೆಚ್ಚಳದ ಜಾರಿಯಿಂದ ವಾರ್ಷಿಕವಾಗಿ 12,815.60 ಕೋಟಿ ರೂ. ಬೊಕ್ಕಸದಿಂದ ವೆಚ್ಚವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.ಈ ಕ್ರಮದಿಂದಾಗಿ 47.58 ಲಕ್ಷ ಉದ್ಯೋಗಿಗಳು ಮತ್ತು 69.76 ಲಕ್ಷ ಪಿಂಚಣಿದಾರರು ಪ್ರಯೋಜನವನ್ನು ಪಡೆಯಲಿದ್ದಾರೆ. ಈ ಹೆಚ್ಚಳವು 7 ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದೆ. ಉದ್ಯೋಗಿಗಳಿಗೆ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯ ಹೆಚ್ಚುವರಿ ಕಂತಿನ ಬಿಡುಗಡೆಯು ಜನವರಿ 01, 2023 ರಿಂದ ಜಾರಿಗೆ ಬರಲಿದೆ.

ತುಟ್ಟಿಭತ್ಯೆ ಹೆಚ್ಚಳದ ಹೊರತಾಗಿ, 2023-24ರ ಋತುವಿನಲ್ಲಿ ಕಚ್ಚಾ ಸೆಣಬಿನ ಕನಿಷ್ಠ ಬೆಂಬಲ ಬೆಲೆಯನ್ನು (MSP) ಪ್ರತಿ ಕ್ವಿಂಟಲ್‌ಗೆ 5,050 ರೂ. ಗಳನ್ನು ಕೇಂದ್ರವು ಅನುಮೋದಿಸಿದೆ. ಇದಲ್ಲದೇ ಉಜ್ವಲಾ ಸಿಲಿಂಡರ್‌ ಸಬ್ಸಿಡಿಯನ್ನು ಒಂದು ವರ್ಷಗಳ ಅವಧಿಗೆ ಹೆಚ್ಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!