METRO | ಇಂದು ವೈಟ್ ಫೀಲ್ಡ್-ಕೆ.ಆರ್. ಪುರ ಮೆಟ್ರೋ ಉದ್ಘಾಟನೆ, ಹಲವು ಕಡೆ ಸಂಚಾರ ನಿರ್ಬಂಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುದಿನಗಳ ಕನಸು ವೈಟ್‌ಫೀಲ್ಡ್-ಕೆ.ಆರ್. ಪುರ ಮೆಟ್ರೋ ಸಂಚಾರಕ್ಕೆ ಇಂದು ಗ್ರೀನ್ ಸಿಗ್ನಲ್ ಸಿಗಲಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಿ ಮೆಟ್ರೋ ಲೈನ್ ಉದ್ಘಾಟನೆ ಮಾಡಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿ, ವೈಟ್‌ಫೀಲ್ಡ್‌ನ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಯೇ ಗ್ರೀನ್ ಸಿಗ್ನಲ್ ದೊರೆಯಲಿದ್ದು, ಮೆಟ್ರೋ ಸಂಚಾರ ಕೂಡ ಮಾಡಲಿದ್ದಾರೆ. ವೈಟ್ ಫೀಲ್ಡ್ ಕಡೆ ಸಾಕಷ್ಟು ಐಟಿಬಿಟಿ ಕಂಪನಿಗಳಿದ್ದು, ಟ್ರಾಫಿಕ್‌ನಲ್ಲಿ ಸಿಲುಕುತ್ತಿದ್ದ ಉದ್ಯೋಗಿಗಳಿಗೆ ಬಿಗ್ ರಿಲೀಸ್ ಸಿಕ್ಕಿದೆ.

ವರ್ತೂರು ಕೋಡಿಯಿಂದ ಓ ಫಾರಂ ಜಂಕ್ಷನ್ ಮೂಲಕ ಕನ್ನಮಂಗಲ ಗೇಟ್‌ವರೆಗೆ ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 2:30 ವರೆಗೆ ಪರ್ಯಾಯ ಮಾರ್ಗ ಬಳಸಬೇಕಿದೆ. 13.71 ಕಿಲೋಮೀಟರ್‌ನ ಪರ್ಪಲ್ ಮಾರ್ಗದಲ್ಲಿ ಒಟ್ಟು ೧೩ ಸ್ಟಾಪ್‌ಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!