ಗ್ರಾಹಕರಿಗೆ ಗುಡ್ ನ್ಯೂಸ್: ಭಾರತದಾದ್ಯಂತ ಅಮುಲ್ ಹಾಲಿನ ಪ್ಯಾಕ್ ಬೆಲೆ 1 ರೂ. ಕಡಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮುಲ್ ತನ್ನ 1 ಲೀಟರ್ ಪ್ಯಾಕ್‌ಗಳಾದ ಗೋಲ್ಡ್, ತಾಜಾ ಮತ್ತು ಟೀ ಸ್ಪೆಷಲ್ ಹಾಲಿನ ಬೆಲೆಯನ್ನು 1 ರೂ. ಕಡಿಮೆ ಮಾಡಿದೆ.

ಈ ಕಡಿತವು 1 ಲೀಟರ್ ಪ್ಯಾಕ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಅಮುಲ್ ಹಾಲಿನ ಪ್ಯಾಕ್​ಗಳ ಬೆಲೆ ಲೀಟರ್​ಗೆ 1 ರೂ. ಕಡಿಮೆಯಾಗಿರುವುದನ್ನು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಘೋಷಿಸಿದ್ದಾರೆ.

ಅಮುಲ್ ಹಾಲಿನ ಬೆಲೆ ಬದಲಾವಣೆಯ ನಂತರ, 1 ಲೀಟರ್ ಅಮುಲ್ ಗೋಲ್ಡ್ ಹಾಲಿನ ಪೌಚ್‌ನ ಬೆಲೆ 66 ರೂ.ಗಳಿಂದ 65 ರೂ.ಗಳಿಗೆ ಇಳಿಯಲಿದೆ. 1 ಲೀಟರ್ ಅಮುಲ್ ಟೀ ಸ್ಪೆಷಲ್ ಹಾಲಿನ ಪೌಚ್‌ನ ಬೆಲೆ 62 ರೂ.ಗಳಿಂದ 61 ರೂ.ಗಳಿಗೆ ಇಳಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!