ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನರ ಮನ ಗೆದ್ದಿರುವ ಹಿಂದಿ ವೆಬ್ ಸೀರೀಸ್ ಫ್ಯಾಮಿಲಿ ಮ್ಯಾನ್ ಸೀಸನ್ 3 ಆಗಮನಕ್ಕೆ ಎಲ್ಲ ಸಿದ್ಧತೆ ಆಗಿದೆ. ಸೀಸನ್ 3 ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಪ್ರಶ್ನೆಗೆ ನಟ ಮನೋಜ್ ಬಾಜ್‌ಪೈ ಉತ್ತರ ನೀಡಿದ್ದಾರೆ.
ಫ್ಯಾಮಿಲಿ ಮ್ಯಾನ್ ಸೀಸನ್ 3 ನವೆಂಬರ್ನಲ್ಲಿ ರಿಲೀಸ್ ಆಗಲಿದೆ. ನವೆಂಬರ್ನಲ್ಲಿ ಹೊಸ ಸೀಸನ್ ಬರಲಿದೆ. ಈ ಸರಣಿಗೆ ಹೊಸ ನಟ ಸೇರ್ಪಡೆ ಆಗಿದ್ದಾರೆ ಎಂಬ ಸುದ್ದಿಯನ್ನು ನೀವು ಕೇಳಿರಬಹುದು. ಅದುವೇ ಜೈದೀಪ್ ಅಹ್ಲಾವತ್. ಎರಡು ವರ್ಷಗಳ ಹಿಂದೆಯೇ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಪಾತಾಳ್ ಲೋಕ್ ಸೀಸನ್ 2ನಲ್ಲಿ ಒಳ್ಳೆಯ ನಟನೆ ಮಾಡಿದ್ದಾರೆ. ನಮ್ಮ ಅದೃಷ್ಟ, ಅವರು ಫ್ಯಾಮಿಲಿಮ್ಯಾನ್ ಸೀಸನ್ 3ಗೆ ಸಿಕ್ಕರು. ಈ ಸೀಸನ್ ದೊಡ್ಡದಾಗಿ ಹಾಗೂ ಸುಂದರವಾಗಿ ಮೂಡಿ ಬಂದಿದೆ ಎಂದು ಮನೋಜ್ ಹೇಳಿದ್ದಾರೆ.
ರಾಜ್ ಹಾಗೂ ಡಿಕೆ ಅವರು ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 3’ನ ನಿರ್ದೇಶನ ಮಾಡುತ್ತಾ ಇದ್ದಾರೆ. ಅವರು ಈ ಮೊದಲು ‘ಫರ್ಜಿ’, ‘ಸಿಟಾಡೆಲ್: ಹನಿ ಬನಿ’ ರೀತಿಯ ಸರಣಿಗಳಲ್ಲಿ ಬ್ಯುಸಿ ಇದ್ದರು. ಈ ಕಾರಣಕ್ಕೆ ಹೊಸ ಸೀಸನ್ ಶೂಟ್ ಮಾಡಲು ಸಾಧ್ಯ ಆಗಿರಲಿಲ್ಲ. ಈಗ ಸಮಯ ಮಾಡಿಕೊಂಡು ಅವರು ‘ದಿ ಫ್ಯಾಮಿಲಿ ಮ್ಯಾನ್ ಸೀಸನ್ 3’ ಶೂಟ್ ಆರಂಭಿಸಿದ್ದಾರೆ. ಪ್ರಿಯಾಮಣಿ ಕೂಡ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.