ಅಭಿಮಾನಿಗಳಿಗೆ ಗುಡ್​ನ್ಯೂಸ್​ ನೀಡಿದ ಕೆಜಿಎಫ್​​ 2: ಅಮೆಜಾನ್​ ಪ್ರೈಮ್​​ನಲ್ಲಿ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್​​ 2 ಅಭಿಮಾನಿಗಳಿಗೆ ಗುಡ್​ನ್ಯೂಸ್​ ನೀಡಿದ್ದು, ಈ ಚಿತ್ರವನ್ನ ಅಮೆಜಾನ್​ ಪ್ರೈಮ್​​ನಲ್ಲೂ ವೀಕ್ಷಣೆ ಮಾಡಲು ಅವಕಾಶ ಮಾಡಿ ಕೊಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಅಮೆಜಾನ್ ಪ್ರೈಮ್​ ಮಹತ್ವದ ಘೋಷಣೆ ಮಾಡಿದೆ. ಅಮೆಜಾನ್​ ಪ್ರೈಮ್​​ನಲ್ಲಿ ರೆಂಟಲ್ ಬೇಸಸ್ ಆಧಾರದ ಮೇಲೆ ಕೆಜಿಎಫ್​ 2 ಸಿನಿಮಾ ವೀಕ್ಷಣೆ ಮಾಡಬಹುದಾಗಿದ್ದು, ಅದಕ್ಕಾಗಿ 199 ರೂಪಾಯಿ ಹಣ ಸಂದಾಯ ಮಾಡಬೇಕಾಗುತ್ತದೆ. ಸದ್ಯ ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಲಭ್ಯ ಇದೆ.

ಅಮೆಜಾನ್​ ಪ್ರೈಮ್​ ಅಪ್ಲಿಕೇಶನ್​​ನಲ್ಲಿ primevideo.com ನಲ್ಲಿ ಸ್ಟೋರ್​​ ಟ್ಯಾಬ್​(STORE)ನಲ್ಲಿ ಈ ಚಿತ್ರ ಲಭ್ಯವಿದೆ. ಸ್ಮಾರ್ಟ್​ ಫೋನ್​, ಸ್ಮಾರ್ಟ್ ಟಿವಿ ಬಳಕೆ ಮಾಡುವವರು ಈ ಚಿತ್ರ ವೀಕ್ಷಣೆ ಮಾಡಬಹುದಾಗಿದೆ. ಹಣ ಸಂದಾಯ ಮಾಡಿದ 48 ಗಂಟೆಯೊಳಗೆ ಕೆಜಿಎಫ್ 2 ಸಿನಿಮಾ ನೋಡ ಬಹುದಾಗಿದೆ.

ಕೆಜಿಎಫ್ 2 ಸಿನಿಮಾ ರೆಂಟಲ್ ಬೇಸಸ್ ಆಧಾರದಲ್ಲಿ ಲಭ್ಯವಿರುವ ಕಾರಣ ಇದಕ್ಕೆ ಅಮೆಜಾನ್ ಪ್ರೈಮ್ ಸದಸ್ಯರಾಗುವ ಅಗತ್ಯವಿಲ್ಲ.ಹಾಗಾಗಿ ಅಮೆಜಾನ್​ ಪ್ರೈಮ್ ಸದಸ್ಯರಲ್ಲದವರಿಗೂ ಸಿನಿಮಾ ನೋಡುವ ಅವಕಾಶ ಇರುತ್ತೆ.

ಏ. 14ರಂದು ಪ್ರಪಂಚದಾದ್ಯಂತ ತೆರೆ ಕಂಡಿರುವ ಕೆಜಿಎಫ್​ 2 ಚಿತ್ರ ಈಗಾಗಲೇ ಸಾವಿರ ಕೋಟಿ ರೂ.ಗೂ ಅಧಿಕ ಹಣ ಗಳಿಕೆ ಮಾಡಿದೆ. ಈ ಚಿತ್ರದಲ್ಲಿ ನಟ ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್​, ಪ್ರಕಾಶ್ ರಾಜ್​, ರಾವ್ ರಮೇಶ್, ಅಚುತ್​ ಕುಮಾರ್​ ಸೇರಿದಂತೆ ಅನೇಕರು ನಟನೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!