ರೈತಾಪಿ ವರ್ಗಕ್ಕೆ ಗುಡ್ ನ್ಯೂಸ್: ಜೂನ್ ಆರಂಭವೇ ಕೇರಳಕ್ಕೆ ಪ್ರವೇಶಿಸಲಿದ್ದಾನೆ ‘ವರುಣ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಗಾರು ಪೂರ್ವ ಮಳೆಯಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನ ಕುಸಿದಿದೆ. ಇದೇ ವೇಳೆ ಹವಾಮಾನ ಸಂಸ್ಥೆ ಕೂಡ ಒಳ್ಳೆಯ ಸುದ್ದಿ ನೀಡಿದೆ. ಹವಾಮಾನ ಇಲಾಖೆ ಪ್ರಕಾರ ಪ್ರಸಕ್ತ ಮಾನ್ಸೂನ್ ಲೈನ್ ಜೂನ್ 1 ರಂದು ಕೇರಳ ಪ್ರವೇಶಿಸಲಿದೆ.

ನೈಋತ್ಯ ಮಾನ್ಸೂನ್ ಮೇ 19 ರಂದು ದಕ್ಷಿಣ ಅಂಡಮಾನ್, ದಕ್ಷಿಣ ಬಂಗಾಳ ಕೊಲ್ಲಿ ಮತ್ತು ನಿಕೋಬಾರ್ ದ್ವೀಪಗಳಿಗೆ ಆಗಮಿಸಲಿದ್ದು, ಜೂನ್ 1 ರ ವೇಳೆಗೆ ಕೇರಳವನ್ನು ತಲುಪಲಿದೆ. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ, 15 ರ ವೇಳೆಗೆ ಮುಂಗಾರು ದೇಶದಾದ್ಯಂತ ಹರಡುವ ನಿರೀಕ್ಷೆಯಿದೆ.

ಕೇರಳದ ನಂತರ ಕೆಲವು ದಿನಗಳ ನಂತರ, ಮುಂಗಾರು ಕರ್ನಾಟಕ ಕರಾವಳಿಯನ್ನು ತಲುಪುತ್ತದೆ ಮತ್ತು ನಂತರ ರಾಜ್ಯದಾದ್ಯಂತ ಹರಡುತ್ತದೆ. ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!