ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು ಮೂರು ದಶಕಗಳಿಂದ ಕೈಬಿಟ್ಟಿದ್ದ ಅಣೆಕಟ್ಟು ನಿರ್ಮಿಸುವ ಮೂಲಕ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹೊಡೆತ ನೀಡಿದೆ. 1995 ರಿಂದ ನನೆಗುದಿ ಬಿದಿದ್ದ ಶಾಹ್‌ಪುರ ಕಂಡಿ ಅಣೆಕಟ್ಟಿನ ನಿರ್ಮಾಣ ಪೂರ್ಣಗೊಂಡಿದ್ದು, ರಾವಿ ನದಿಯಿಂದ ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
ಇದು ಪಾಕಿಸ್ತಾನದ ಕೃಷಿಗೆ ತೀವ್ರ ಹೊಡೆತವನ್ನು ನೀಡುತ್ತದೆ ಮತ್ತು ಲಕ್ಷಾಂತರ ಭಾರತೀಯ ರೈತರು ಈ ನದಿಯ ನೀರಿನಿಂದ ಪ್ರಯೋಜನ ಪಡೆಯುತ್ತಾರೆ.
ಇದರಿಂದ ಜಮ್ಮು, ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ 32,000 ಹೆಕ್ಟೇರ್ ಭೂಮಿಗೆ ನೀರು ಹರಿಸಲಾಗುತ್ತದೆ. ಸರಿಸುಮಾರು 1,150 ಕ್ಯುಸೆಕ್ ನೀರನ್ನು ಉಳಿಸುವ ಮೂಲಕ, ಇದು ಲಕ್ಷಾಂತರ ರೈತರಿಗೆ ಉತ್ತಮ ಬೆಳೆಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
ಜಮ್ಮು ಮತ್ತು ಕಾಶ್ಮೀರದ ಕಠುವಾ, ಸಾಂಬಾ ರೈತರಿಗೆ ಅಣೆಕಟ್ಟಿನಿಂದ ವಿಶೇಷವಾಗಿ ಪ್ರಯೋಜನವಾಗಲಿದೆ.