Monday, December 11, 2023

Latest Posts

ಗ್ರೂಪ್ ಬಿ, ಸಿ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ತಲಾ ₹ 7 ಸಾವಿರ ಬೋನಸ್‌ ಘೋಷಿಸಿದ ದೆಹಲಿ ಸಿಎಂ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಹಬ್ಬಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ರಾಜ್ಯದ ಎಲ್ಲಾ ಗ್ರೂಪ್ ಬಿ ನಾನ್ ಗೆಜೆಟೆಡ್ ಮತ್ತು ಗ್ರೂಪ್ ಸಿ ನೌಕರರಿಗೆ ಸೋಮವಾರ ತಲಾ ₹7 ಸಾವಿರ ಬೋನಸ್ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ‘ದೆಹಲಿ ಸರ್ಕಾರದಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು ನಮ್ಮ ಕುಟುಂಬದಂತೆಯೇ ಇದ್ದಾರೆ. ಇಂದು ನಾನು ಅವರಿಗೆ ಖುಷಿಯ ಸುದ್ದಿ ನೀಡುತ್ತಿದ್ದೇನೆ. ಇದು ಹಬ್ಬಗಳ ತಿಂಗಳು. ಈ ಸಮಯದಲ್ಲಿ 80 ಸಾವಿರ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಒಟ್ಟು ಮೊತ್ತ 56 ಕೋಟಿ ರೂ. ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!