IPL ಅಭಿಮಾನಿಗಳಿಗೆ ಗುಡ್ ನ್ಯೂಸ್: ಮುಂದಿನ ವಾರದಿಂದ ಮತ್ತೆ ಶುರುವಾಗುತ್ತಾ ಪಂದ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ನಡುವಿನ ಘೋರ ಘರ್ಷಣೆಗಳ ನಂತರ ಮೇ 10, 2025ರ ಸಂಜೆ 5 ಗಂಟೆಯಿಂದ ದಾಳಿ ಮತ್ತು ಸೈನಿಕ ಕಾರ್ಯಾಚರಣೆಗಳನ್ನು ನಿಲ್ಲಿಸಲು ಎರಡು ದೇಶಗಳು ಒಪ್ಪಿಕೊಂಡಿದೆ.

ಈ ಶಾಂತಿ ಒಪ್ಪಂದದಿಂದ ಐಪಿಎಲ್ 2025 ಮುಂದಿನ ವಾರದಿಂದ ಮತ್ತೆ ಆರಂಭವಾಗುವ ಸಾಧ್ಯತೆ ಇದೆ.

ಬಿಸಿಸಿಐ ಟೂರ್ನಮೆಂಟ್‌ನ ಉಳಿದ ಪಂದ್ಯಗಳಿಗಾಗಿ ಬೆಂಗಳೂರು, ಚೆನ್ನೈ, ಮತ್ತು ಹೈದರಾಬಾದ್ ನಗರಗಳನ್ನು ಆಯ್ಕೆ ಮಾಡಿದೆ. ಒಟ್ಟು 12 ಲೀಗ್ ಪಂದ್ಯಗಳು ಮತ್ತು ನಾಲ್ಕು ಪ್ಲೇಆಫ್‌ಗಳು ಉಳಿದಿವೆ.

ಭಾರತ-ಪಾಕಿಸ್ತಾನದ ನಡುವಿನ ಗಡಿ ಉದ್ವಿಗ್ನತೆಯಿಂದಾಗಿ, ಬಿಸಿಸಿಐ ಐಪಿಎಲ್ 2025 ಟೂರ್ನಮೆಂಟ್ ಅನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಿತ್ತು. ಪಂಜಾಬ್ ಕಿಂಗ್ಸ್ (PBKS) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ನಡುವಿನ 58ನೇ ಪಂದ್ಯವು ಧರ್ಮಶಾಲಾದ ಸ್ಟೇಡಿಯಂನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಕ್ಕೆ ರದ್ದಾಯಿತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!