L&T ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್: ನಿಮಗೆ ಸಿಗಲಿದೆ ವೇತನ ಸಹಿತ ಮುಟ್ಟಿನ ರಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ದಿನಾಚರಣೆಗೆ L&T ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ನೀಡಿದೆ.

ಹೌದು! L&T ಮುಖ್ಯಸ್ಥ ಎಸ್ಎನ್ ಸುಬ್ರಹ್ಮಣ್ಯನ್ ತಮ್ಮ ಕಂಪನಿ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಒಂದು ದಿನ ಮುಟ್ಟಿನ ರಜೆ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ 5000 ಮಹಿಳಾ ಉದ್ಯೋಗಿಗಳಿಗೆ ಕಂಪನಿಯ ಹೊಸ ನಿಯಮ ನೆರವಾಗಲಿದೆ.

ಇದು L&T ಮಾತೃ ಸಂಸ್ಥೆಯ ಉದ್ಯೋಗಗಳಿಗೆ ಈ ನಿಯಮ ಅನ್ವಯಿಸಲಿದೆ. L&T ಜೊತೆ ಆಸೋಸಿಯೇಟ್ ಆಗಿರುವ, ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಗಳ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ. L&T ಮಾತೃ ಸಂಸ್ಥೆಯಲ್ಲಿ ಬರೋಬ್ಬರಿ 60,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಶೇಕಡಾ 9 ರಷ್ಟು ಅಂದರೆ 5,000 ಮಹಿಳಾ ಉದ್ಯೋಗಿಗಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!