ವಿವಾಹಿತ ಮಹಿಳೆಯರಿಗೆ ಗುಡ್ ನ್ಯೂಸ್: 2023ರಿಂದ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಸಿಗಲಿದೆ ಅವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಲ್ಲಿಯವರೆಗೆ ಕೇವಲ ಅವಿವಾಹಿತ ಯುವತಿಯರಿಗೆ ಮಾತ್ರ ಸೀಮಿತವಾಗಿದ್ದ ಮಿಸ್ ಯೂನಿವರ್ಸ್​ನಲ್ಲಿ ಇನ್ನು ಮುಂದೆ ವಿವಾಹಿತ ಮಹಿಳೆಯರು ಮತ್ತು ತಾಯಂದಿರು ಕೂಡ ಸ್ಪರ್ಧಿಸಬಹುದು.
ಹೌದು, ಮಿಸ್ ಯೂನಿವರ್ಸ್​​ನಲ್ಲಿ ತಾಯಂದಿರು ಮತ್ತು ವಿವಾಹಿತ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ತನ್ನ ಸ್ಪರ್ಧೆಯ ಅರ್ಹತೆಯನ್ನು ವಿಸ್ತರಿಸುತ್ತಿದೆ. ಇದು ಐತಿಹಾಸಿಕ ನಿರ್ಧಾರವಾಗಿದ್ದು, ಹಲವರು ಸ್ವಾಗತಿಸಿದ್ದಾರೆ.
ಹಲವು ಕಠಿಣ ಮಾನದಂಡಗಳನ್ನು ಹೊಂದಿದ್ದ ಈ ಸ್ಪರ್ಧೆಯಲ್ಲಿ, ಬರುವ ಅಂದರೆ 2023 ರಿಂದ ಪ್ರಾರಂಭವಾಗುವ ಸ್ಪರ್ಧೆಯ ಸ್ಪರ್ಧಾಳುಗಳಿಗೆ ಈ ಮೇಲಿನ ಅವಕಾಶಗಳ ಜೊತೆಗೆ ಕೆಲವು ಸಡಿಲಿಕೆ, ವಿಶೇಷ ಅನುಮತಿಗಳನ್ನು ಮಾರ್ಪಾಡು ಮಾಡಲಾಗಿದೆ.
ಪ್ರತಿ ವರ್ಷ 80 ದೇಶಗಳ ರೂಪದರ್ಶಿಯರು ಈ ಸ್ಪರ್ಧೆಯಲ್ಲಿ ಭಾಗವಹಿದರೆ ಅದರಲ್ಲಿ ಕೇವಲ ಒಬ್ಬರು ಮಾತ್ರ ಈ ಕಿರೀಟ ಧರಿಸಲು ಸಾಧ್ಯ. ಆದರೆ, ಹಲವರಿಗೆ ಗೆಲ್ಲುವ ಆಸೆ ಇರಲಿ, ಈ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಒಂದು ಸವಾಲಾಗಿತ್ತು. ಅದಕ್ಕೆ ಕಾರಣ ಅಲ್ಲಿಯ ಕಠಿಣ ಮಾನದಂಡಗಳು. ಆದರೆ, ಈಗ ವಿವಾಹಿತ ಮಹಿಳೆಯರು ಮತ್ತು ಮಕ್ಕಳ ತಾಯಂದಿರು ಭಾಗವಹಿಸಬಹುದು ಎಂದು ಹೇಳಿದೆ. ಈ ಬದಲಾವಣೆಯನ್ನು ಮಾಜಿ ವಿಶ್ವ ಸುಂದರಿಯರು ಸೇರಿದಂತೆ ಹಲವುರು ಸ್ವಾಗತಿಸಿದ್ದಾರೆ.
ಈ ಹಿಂದಿನ ವಿಶ್ವ ಸುಂದರಿ ಸ್ಪರ್ಧೆಯ ನಿಯಮಗಳ ಪ್ರಕಾರ ಭಾಗವಹಿಸುವ ಸ್ಪರ್ಧಾಳುಗಳು ಅವಿವಾಹಿತರಾಗಿಯೇ ಇರಬೇಕಿತ್ತು. ಮಕ್ಕಳಾದ ತಾಯಂದಿರುಗಳಿಗೆ ಸ್ಪರ್ಧಿಸಲು ಅವಕಾಶ ಸಹ ಇರಲಿಲ್ಲ. ಜೊತೆಗೆ ವಿಜೇತರು ಮಿಸ್ ಯೂನಿವರ್ಸ್ ಆಗಿ ಆಳ್ವಿಕೆ ಮಾಡುವಾಗ ಗರ್ಭಿಣಿಯಾಗಿರಬಾರದು ಎಂಬ ನಿಯಮವನ್ನೂ ಸಹ ಹೇರಲಾಗಿತ್ತು. ಆದರೆ, ಇದೀಗ ಈ ನಿಯಮ ಬದಲಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!