ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಪ್ರೇಮಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಇದೇ ಸೆ.20ರಂದು ರಾಷ್ಟ್ರೀಯ ಸಿನಿಮಾ ದಿನವಾಗಿದೆ. ಈ ದಿನದಂದು ಸಿನಿಮಾ ನೋಡುವ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ವಿಶೇಷ ರಿಯಾಯಿತಿ ನೀಡಲಾಗ್ತಿದೆ. ರಾಷ್ಟ್ರ ವ್ಯಾಪ್ತಿ ಚಿತ್ರಮಂದಿರಗಳಲ್ಲಿ 99 ರೂ.ಗೆ ಟಿಕೆಟ್ ಬೆಲೆ ಇಳಿಕೆ ಮಾಡಲು ‘ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ನಿರ್ಧರಿಸಿದೆ.
ಸೆ.20ರಂದು ಪಿವಿಆರ್, ಸಿನಿಪೊಲೀಸ್, ಮಿರಜ್, ಐನಾಕ್ಸ್, ಸಿಟಿಪ್ರೈಡ್ ಸೇರಿದಂತೆ 4000ಕ್ಕೂ ಹೆಚ್ಚು ಚಿತ್ರಮಂದಿರಗಳು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಿದ್ದಾರೆ. ಈ ದಿನದಂದು ದೇಶಾದ್ಯಂತ ಚಲನಚಿತ್ರ ಪ್ರೇಕ್ಷಕರು ಕೇವಲ 99 ರೂ.ಗೆ ಸಿನಿಮಾ ವೀಕ್ಷಿಸುವ ಅವಕಾಶ ನೀಡಲಾಗುತ್ತಿದೆ.