‘ಎಣ್ಣೆ’ಪ್ರಿಯರಿಗೆ ಗುಡ್ ನ್ಯೂಸ್: ಜಸ್ಟ್ 99 ರೂ.ಗೆ ಸಿಗಲಿದೆ ಎಲ್ಲಾ ಬ್ರ್ಯಾಂಡ್ 180 ml ಮದ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ಮದ್ಯದ ನೀತಿ ಜಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಂಪುಟ ಸಭೆ ಅನುಮೋದನೆ ನೀಡಿದ್ದು, ಈ ಮೂಲಕ ಎಲ್ಲಾ ಬ್ರ್ಯಾಂಡ್ ಗಳ 180 ಎಂಎಲ್ ಮದ್ಯದ ಬಾಟಲಿಗಳಿಗೆ ಕೇವಲ 99 ರೂ. ಗರಿಷ್ಠ ದರ ನಿಗದಿಪಡಿಸಲಾಗಿದೆ.

ಅಕ್ಟೋಬರ್ 1ರಿಂದಲೇ ಆಂಧ್ರಪ್ರದೇಶ ರಾಜ್ಯದ ನೂತನ ಮದ್ಯ ನೀತಿ ಜಾರಿಗೆ ಬರಲಿದ್ದು, ಕೈಗೆಟುಕುವ ಮದ್ಯ ದರ ಪರಿಚಯಿಸಲಾಗಿದೆ.ಎಲ್ಲಾ ಬ್ರ್ಯಾಂಡ್ ಗಳ 180 ಎಂಎಲ್ ಮದ್ಯದ ಬಾಟಲಿಗಳಿಗೆ ಕೇವಲ 99 ರೂಪಾಯಿ ಗರಿಷ್ಠ ದರ ನಿಗದಿಪಡಿಸಲಾಗಿದೆ.

ಆಂಧ್ರಪ್ರದೇಶದಲ್ಲಿರುವ 3736 ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳಲ್ಲಿ ಶೇಕಡ 10ರಷ್ಟು ಕಳ್ಳು ತೆಗೆಯುವ ಸಮುದಾಯದವರಿಗೆ ನೀಡಲಾಗುವುದು. ಆನ್ಲೈನ್ ಲಾಟರಿ ವ್ಯವಸ್ಥೆ ಮೂಲಕ ಇವುಗಳನ್ನು ಹಂಚಿಕೆ ಮಾಡಲಾಗುವುದು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!