ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಮ ಮಂದಿರ ಉದ್ಘಾಟನೆಗೆ ಭಾರತ ಸಜ್ಜಾಗಿದೆ. ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದೀಗ ರಾಮ ಭಕ್ತರಿಗೆ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಿದೆ. ಜ.22ರಂದು ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ. ಪ್ರಾಣಪ್ರತಿಷ್ಠೆ ಬಳಿಕ ಆಯೋಧ್ಯೆಗೆ ಭಾರತೀಯ ರೈಲ್ವೆ ವಿಶೇಷ ಆಸ್ಥಾ ರೈಲು ಸೇವೆ ಆರಂಭಿಸುತ್ತಿದೆ. ಪ್ರತಿ ದಿನ ಆಯೋಧ್ಯೆಗೆ 66 ರೈಲುಗಳು ಸೇವೆ ನೀಡಲಿದೆ.
ಪ್ರತಿ ರೈಲು 22 ಬೋಗಿಗಳನ್ನು ಹೊಂದಿದೆ. ಸದ್ಯ ಭಾರತೀಯ ರೈಲ್ವೇ ಪ್ರತಿ ದಿನ 66 ರೈಲು ಸೇವೆಯನ್ನು ಆಯೋಧ್ಯೆಗೆ ನೀಡಲಿದೆ. ಆದರೆ ಶೀಘ್ರ ಬೇಡಿಕೆಗೆ ಅನುಗುಣವಾಗಿ ರೈಲುಗಳ ಸಂಖ್ಯೆ ಹಾಗೂ ವಿವಿಧ ನಗರ ಪಟ್ಟಣಗಳಿಂದಲೂ ಆಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸಲು ಭಾರತೀಯ ರೈಲ್ವೇ ಇಲಾಖೆ ನಿರ್ಧರಿಸಿದೆ. ದೆಹಲಿ, ಮುಂಬೈ, ಚೆನ್ನೈ, ಸಬರಮತಿ, ಡೆಹ್ರಡೂನ್ ಸೇರಿದಂತೆ ದೇಶದ ವಿವಿಧ ನಗರಗಳಿಂದ ಆಯೋಧ್ಯೆಗೆ ರೈಲು ಸೇವೆ ಇರಲಿದೆ.
ಆಯೋಧ್ಯೆಗೆ ಸಂಚರಿಸುವ ಆಸ್ಥಾ ವಿಶೇಷ ರೈಲಿನಲ್ಲಿ ಸಸ್ಯಾಹಾರಿ ಆಹಾರದ ಮಾತ್ರ ಇರಲಿದೆ. ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯಪ್ರದೇಶ, ತಣಿಲುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಆಸ್ಥಾ ವಿಶೇಷ ರೈಲು ಆಯೋಧ್ಯೆಗೆ ಸಂಚಾರ ಮಾಡಲಿದೆ.