ಸಣ್ಣ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಯುಪಿಐ ಇನ್ಸೆಂಟಿವ್ ಸ್ಕೀಮ್ ಗೆ ಮೋದಿ ಸರಕಾರ ಅನುಮೋದನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು (ಪಿ 2 ಎಂ) ಉತ್ತೇಜಿಸಲು ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಯುಪಿಐ ಹಣ ಪಾವತಿಗೆ ಉತ್ತೇಜನ, ಮಹಿಳಾ ಸಬಲೀಕರಣ, ಮೂಲಸೌಕರ್ಯ ಅಭಿವೃದ್ಧಿ, ಪಶುಸಂಗೋಪನಾ ಕ್ಷೇತ್ರದ ಬೆಳವಣಿಗೆ ಇತ್ಯಾದಿ ಕಾರ್ಯಗಳಿಗೆ ಪುಷ್ಟಿ ನೀಡುವ ವಿವಿಧ ಯೋಜನೆಗಳಿಗೆ ಇಂದು ಬುಧವಾರ ಕೇಂದ್ರ ಸಂಪುಟ ಅನುಮೋದನೆ ಕೂಡ ನೀಡಿದೆ.

ವ್ಯಕ್ತಿಯಿಂದ ವರ್ತಕರಿಗೆ ಯುಪಿಐ ಹಣ ಪಾವತಿಸುವಾಗ ಸಣ್ಣ ಮೊತ್ತದ ಟ್ರಾನ್ಸಾಕ್ಷನ್​​ಗಳಿಗೆ ಉತ್ತೇಜನ ನೀಡುವ ಸ್ಕೀಮ್ ಇದರಲ್ಲಿ ಒಳಗೊಂಡಿದೆ.

ಸಣ್ಣ ಮೊತ್ತದ ಯುಪಿಐ ವಹಿವಾಟುಗಳಿಗೆ ಉತ್ತೇಜನ
ಗ್ರಾಹಕರಿಂದ ವರ್ತಕರಿಗೆ ಸಣ್ಣ ಮೊತ್ತದ ಯುಪಿಐ ಹಣ ಪಾವತಿಗೆ ಉತ್ತೇಜಿಸಲು ಸರ್ಕಾರ ಇನ್ಸೆಂಟಿವ್ ಸ್ಕೀಮ್ ಆರಂಭಿಸುತ್ತಿದೆ. ಸಣ್ಣ ವರ್ತಕರಿಗೆ ಅವರ ಗ್ರಾಹಕರಿಂದ ಭೀಮ್-ಯುಪಿಐ ಮೂಲಕ ಮಾಡಲಾಗುವ 2,000 ರೂಗಿಂತ ಕಡಿಮೆ ಮೌಲ್ಯದ ಪಾವತಿಗೆ ಈ ಯೋಜನೆ ಅನ್ವಯ ಆಗುತ್ತದೆ. ಈ ಸಣ್ಣ ಯುಪಿಐ ಟ್ರಾನ್ಸಾಕ್ಷನ್​​ಗಳನ್ನು ಪಡೆಯುವ ಸಣ್ಣ ವರ್ತಕರಿಗೆ ಶೇ. 0.15ರಷ್ಟು ಇನ್ಸೆಂಟಿವ್ ನೀಡಲಾಗುತ್ತದೆ. ಅಂದರೆ, 2,000 ರೂ ಮೌಲ್ಯದ ವಹಿವಾಟಾದರೆ 3 ರೂ ಇನ್ಸೆಂಟಿವ್ ಸಿಗುತ್ತದೆ.ಬ್ಯಾಂಕುಗಳು ನೇರವಾಗಿ ವರ್ತಕರ ಖಾತೆಗೆ ಈ ಹಣ ವರ್ಗಾಯಿಸುತ್ತವೆ. ಯುಪಿಐ ಪ್ಲಾಟ್​​​ಫಾರ್ಮ್ ಅನ್ನು ಮತ್ತಷ್ಟು ವ್ಯಾಪಕಗೊಳಿಸುವುದು ಈ ಇನ್ಸೆಂಟಿವ್ ಸ್ಕೀಮ್​​ನ ಉದ್ದೇಶ.

ಸಶಕ್ತ್ ಪಂಚಾಯತ್ ನೇತ್ರಿ ಅಭಿಯಾನ್ ಯೋಜನೆ
ಮಹಿಳಾ ಸಬಲೀಕರಣಕ್ಕೆ 2023ರಲ್ಲಿ ಸಂವಿಧಾನದ ತಿದ್ದುಪಡಿ ಮೂಲಕ ನಾರಿ ಶಕ್ತಿ ವಂದನ್ ಅಧಿನಿಯಮ್ ತರಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಇ ದು ಕಲ್ಪಿಸುತ್ತದೆ.ಇದರ ಬೆನ್ನಲ್ಲೇ ಸರ್ಕಾರ ಇದೀಗ ಸಶಕ್ತ್ ಪಂಚಾಯತ್ ನೇತ್ರಿ ಅಭಿಯಾನ್ ಯೋಜನೆಯನ್ನು ಜಾರಿಗೆ ತಂದಿದೆ. ಪಂಚಾಯಿತಿ ಮಟ್ಟದಲ್ಲಿ ಮಹಿಳಾ ಪ್ರತಿನಿಧಿಗಳನ್ನು ಬಲಪಡಿಸಲು ಮಹಿಳಾ ಸ್ನೇಹಿ ಗ್ರಾಮ ಪಂಚಾಯತ್ ಉಪಕ್ರಮವನ್ನು ಸರ್ಕಾರ ಆರಂಭಿಸಿದೆ.

ಷಟ್ಪಥದ ಹೆದ್ದಾರಿ ನಿರ್ಮಾಣ
ಮುಂಬೈನಲ್ಲಿ ಪಗೋಟೆ ಪೋರ್ಟ್​​ನಿಂದ ಚೌಕ್​​ವರೆಗೆ 29 ಕಿಮೀ ಉದ್ದದ ಷಟ್ಪಥದ ಗ್ರೀನ್​​ಫೀಲ್ಡ್ ಹೆದ್ದಾರಿ ನಿರ್ಮಾಣಕ್ಕೆ ಕ್ಯಾಬಿನೆಟ್ ಕಮಿಟಿ ಅನುಮೋದನೆ ನೀಡಿದೆ.

ಪಿಎಂ ಮಾತೃ ವಂದನ ಯೋಜನೆ
ಪಿಎಂ ಮಾತೃ ವಂದನ ಯೋಜನೆ ಅಡಿ ಈವರೆಗೆ 53.76 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ಯೋಜನೆ ಅಡಿ ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರಿಗೆ ಸರ್ಕಾರ 5,000 ರೂ ಸಹಾಯಧನ ನೀಡುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!