ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಕೊರಿಯಾದ ಫೇಮಸ್ ನೆಟ್ಫ್ಲಿಕ್ಸ್ ಸೀರಿಸ್ ಸ್ಕ್ವಿಡ್ ಗೇಮ್ ಸೀಸನ್ 2 ಯಾವಾಗ ಬರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನೆಟ್ಫ್ಲಿಕ್ಸ್ನಲ್ಲಿ ನಂ.1 ಸ್ಥಾನದಲ್ಲಿದ್ದ ಸ್ಕ್ವಿಡ್ಗೇಮ್ನ ಪಾರ್ಟ್-2ಗಾಗಿ ಫ್ಯಾನ್ಸ್ ಕಾತರದಲ್ಲಿದ್ದಾರೆ. ಕೊರಿಯಾ ಅಷ್ಟೆ ಅಲ್ಲದೆ ಇದನ್ನು ಇಂಗ್ಲಿಷ್ಗೂ ಡಬ್ ಮಾಡಲಾಗಿದೆ. ಮೊದಲ ಸೀಸನ್ 2021ರ ಸೆಪ್ಟೆಂಬರ್ನಲ್ಲಿ ಪ್ರಸಾರ ಕಂಡಿತ್ತು. ಮೊದಲ ಸೀಸನ್ ಕೊನೆಯಲ್ಲಿ ಎರಡನೇ ಸೀಸನ್ಗೆ ಲಿಂಕ್ ನೀಡಲಾಗಿತ್ತು. ಮೂರು ವರ್ಷಗಳ ಬಳಿಕ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಇದೇ ಡಿಸೆಂಬರ್ನಲ್ಲಿ ಸೀಸನ್-2 ಪ್ರಸಾರವಾಗಲಿದೆ.
ಫೈನಲ್ ಸೀಸನ್ 2025ರಲ್ಲಿ ಪ್ರಸಾರ ಕಾಣಲಿದೆ. ಹ್ವಾಂಗ್ ಡಾಂಗ್ ಹ್ಯೂಕ್ ಇದನ್ನು ನಿರ್ದೇಶಿಸಿದ್ದಾರೆ.ಕೊರಿಯನ್ ಸ್ಟಾರ್ ಲೀ ಜುಂಗ್ ಜೀ ಅವರು ಈ ಸೀರಿಸ್ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
다시 운동장에 설 시간이 다가옵니다.
<오징어 게임> 시즌2, 12월 26일 공개.#오징어게임2 #SquidGame2 pic.twitter.com/NS8hTSjU83
— Netflix Korea|넷플릭스 코리아 (@NetflixKR) August 1, 2024