SQUID GAME ಫ್ಯಾನ್ಸ್‌ಗೆ ಸಿಹಿಸುದ್ದಿ, ಈ ದಿನದಂದು ರಿಲೀಸ್‌ ಆಗ್ತಿದೆ ಸೀಸನ್‌-2

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೌತ್‌ ಕೊರಿಯಾದ ಫೇಮಸ್‌ ನೆಟ್‌ಫ್ಲಿಕ್ಸ್‌ ಸೀರಿಸ್‌ ಸ್ಕ್ವಿಡ್‌ ಗೇಮ್‌ ಸೀಸನ್‌ 2 ಯಾವಾಗ ಬರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ನಂ.1 ಸ್ಥಾನದಲ್ಲಿದ್ದ ಸ್ಕ್ವಿಡ್‌ಗೇಮ್‌ನ ಪಾರ್ಟ್‌-2ಗಾಗಿ ಫ್ಯಾನ್ಸ್‌ ಕಾತರದಲ್ಲಿದ್ದಾರೆ. ಕೊರಿಯಾ ಅಷ್ಟೆ ಅಲ್ಲದೆ ಇದನ್ನು ಇಂಗ್ಲಿಷ್‌ಗೂ ಡಬ್‌ ಮಾಡಲಾಗಿದೆ. ಮೊದಲ ಸೀಸನ್ 2021ರ ಸೆಪ್ಟೆಂಬರ್​ನಲ್ಲಿ ಪ್ರಸಾರ ಕಂಡಿತ್ತು. ಮೊದಲ ಸೀಸನ್ ಕೊನೆಯಲ್ಲಿ ಎರಡನೇ ಸೀಸನ್​ಗೆ ಲಿಂಕ್ ನೀಡಲಾಗಿತ್ತು. ಮೂರು ವರ್ಷಗಳ ಬಳಿಕ ಇದಕ್ಕೆ ಎರಡನೇ ಸೀಸನ್ ಬರುತ್ತಿದೆ. ಇದೇ ಡಿಸೆಂಬರ್‌ನಲ್ಲಿ ಸೀಸನ್‌-2 ಪ್ರಸಾರವಾಗಲಿದೆ.

ಫೈನಲ್ ಸೀಸನ್ 2025ರಲ್ಲಿ ಪ್ರಸಾರ ಕಾಣಲಿದೆ. ಹ್ವಾಂಗ್ ಡಾಂಗ್ ಹ್ಯೂಕ್ ಇದನ್ನು ನಿರ್ದೇಶಿಸಿದ್ದಾರೆ.ಕೊರಿಯನ್ ಸ್ಟಾರ್ ಲೀ ಜುಂಗ್ ಜೀ ಅವರು ಈ ಸೀರಿಸ್​ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!