ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ದೇವಸ್ಥಾನ (TTD) ಸಂಬಂಧಿತ ಸೇವೆಗಳನ್ನೂ ಇನ್ನು ವಾಟ್ಸಾಪ್ ಮೂಲಕವೇ ಸುಲಭವಾಗಿ ಪಡೆಯಬಹುದಾದಂತಹ ವ್ಯವಸ್ಥೆಯನ್ನು ಆಂಧ್ರಪ್ರದೇಶ ಸರ್ಕಾರವು ಜಾರಿಗೆ ತಂದಿದೆ.
ವಾಟ್ಸಾಪ್ ಸಂಖ್ಯೆ 9552300009ಗೆ “ಹಾಯ್” ಎಂದು ಸಂದೇಶ ಕಳುಹಿಸಿದರೆ, ಆಯ್ಕೆ ಮಾಡಿದ ವಿವರಗಳನ್ನು ಅಲ್ಲಿ ನೀಡಲಾಗುತ್ತದೆ. ಮೊದಲ ಆಯ್ಕೆಯಾಗಿ “ಟಿಟಿಡಿ ದೇವಾಲಯಗಳ ಸೇವೆಗಳು” ಇರುತ್ತದೆ. ಇದನ್ನು ಆಯ್ಕೆ ಮಾಡಿದ ನಂತರ, ಸ್ಲಾಟೆಡ್ ಸರ್ವದರ್ಶನ ಲೈವ್ ಸ್ಥಿತಿ, ಸರ್ವದರ್ಶನ ಲೈವ್ ಸ್ಥಿತಿ, ಶ್ರೀ ವಾಣಿ ಟ್ರಸ್ಟ್ ಲೈವ್ ಸ್ಥಿತಿ, ಮತ್ತು ಮುಂಗಡ ಠೇವಣಿ ರಿಫಂಡ್ ಲೈವ್ ಸ್ಥಿತಿ ಲಭ್ಯವಿದೆ. ಭಕ್ತರು ತಮಗೆ ಬೇಕಾದ ಮಾಹಿತಿಯನ್ನು ಆಯ್ಕೆ ಮಾಡಿ ಇಲ್ಲಿ ಮಾಹಿತಿನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಪ್ರಸ್ತುತ ಈ ಸೇವೆಯನ್ನು ಟಿಟಿಡಿ ಪ್ರಾಯೋಗಿಕವಾಗಿ (ಟ್ರಯಲ್ ರನ್) ಆರಂಭಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಾಟ್ಸಾಪ್ ಸೇವೆಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.