ವಾಯು ವಿಹಾರ ಮಾಡುವಿರಾ ನಿಮಗಿದು ಸಿಹಿ ಸುದ್ದಿ: ಇನ್ಮುಂದೆ ಬೆಳಗ್ಗೆ 5 ರಿಂದ ರಾತ್ರಿ 8ರವರೆಗೆ ಉದ್ಯಾನ ಓಪನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿನಲ್ಲಿ ವಾಯು ವಿಹಾರ ಮಾಡುವವರಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಅದೇನೆಂದರೆ ಈವರೆಗೆ ಬೆಳಗ್ಗೆ ಮತ್ತು ಸಂಜೆ ಮಾತ್ರ ಉದ್ಯಾನಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದ ಬಿಬಿಎಂಪಿ ಈಗ ಸಮಯವನ್ನು ವಿಸ್ತರಣೆ ಮಾಡಲಾಗಿದೆ.

ಇನ್ನು ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉದ್ಯಾನದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶವನ್ನು ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಉದ್ಯಾನವನಗಳ ವಾಯುವಿಹಾರ ಸಮಯ ಸಡಿಲಗೊಳಿಸಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಸುತ್ತೋಲೆ ಹೊರಡಿಸಿದ್ದಾರೆ. 15 ಗಂಟೆಗಳ ಕಾಲ ಉದ್ಯಾನವನಗಳು ಸಾರ್ವಜನಿಕರಿಗೆ ಪ್ರವೇಶಾವಕಾಶಕ್ಕೆ ಮುಕ್ತವಾಗಿರುತ್ತವೆ. ಈವರೆಗೆ ಬೆಳಿಗ್ಗೆ 5 ರಿಂದ 8 ಮತ್ತು ಸಂಜೆ 4ರಿಂದ 8ರವರೆಗೆ ಓಪನ್ ಮಾಡಲಾಗ್ತಿತ್ತು. ಆದರೆ, ಪಾಲಿಕೆಯ ಹೊಸ ಸುತ್ತೋಲೆ ಅನ್ವಯ ಬೆಳಿಗ್ಗೆ 5ರಿಂದ ರಾತ್ರಿ 8 ಗಂಟೆಗಳವರಗೆ ಉದ್ಯಾನವನಗಳು ಓಪನ್​ ಆಗಿರುತ್ತವೆ.

ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಉದ್ಯಾನಗಳು, ಪಾರ್ಕ್‌ಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ಸೋಂಕು ಇಳಿಕೆ ಆಗುತ್ತಿದ್ದಂತೆ ಉದ್ಯಾನಗಳ ಪ್ರವೇಶಕ್ಕೂ ಅವಕಾಶ ನೀಡುತ್ತಾ ಬಂದಿದೆ. ಆದರೆ. ಕೋವಿಡ್‌ ಬರುವುದಕ್ಕೂ ಮುಂಚೆ ಇದ್ದ ಅವಧಿಯನ್ನು ಮರು ಜಾರಿಗೆ ತರುವಲ್ಲಿ ಬಿಬಿಎಂಪಿ ಹಿಂದೇಟು ಹಾಕಿತ್ತು. ಆದರೆ, ಈಗ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​​ ಅವರು ಸುತ್ತೋಲೆ ಹೊರಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!