ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದು, ಬುಧವಾರದ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ದೇಶದ ಬಡವರಿಗೆ ಉಜ್ವಲ ಯೋಜನೆಯ ಅಡಿಯಲ್ಲಿ ನೀಡಲಾಗುವ ಗ್ಯಾಸ್ ಸಬ್ಸಿಡಿಯನ್ನು 100 ರೂಪಾಯಿ ಏರಿಕೆ ಮಾಡಿದೆ. ಇಲ್ಲಿಯವರೆಗೂ 200 ರೂಪಾಯಿ ಸಬ್ಸಿಡಿ ಪಡೆಯುತ್ತಿದ್ದ ಇವರು, ಇನ್ನು 300 ರೂಪಾಯಿ ಸಬ್ಸಿಡಿ ಪಡೆದುಕೊಳ್ಳಲಿದ್ದಾರೆ.
ಇನ್ಮುಂದೆ ಉಜ್ವಲ ಯೋಜನೆಯ ಫಲಾನುಭವಿಗಳು 600 ರೂಪಾಯಿಗೆ ಸಿಲಿಂಡರ್ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ 300 ರೂಪಾಯಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ. ಈ ಕುರಿತಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದರು.
ಕ್ಯಾಬಿನೆಟ್ ಸಭೆಯ ನಂತ್ರ ಮಾತನಾಡಿದ ಸಚಿವರು, ಉಜ್ವಲ ಯೋಜನೆಯಡಿ ಸಹೋದರಿಯರು 300 ರೂ.ಗಳ ಸಬ್ಸಿಡಿ ಪಡೆಯಲಿದ್ದಾರೆ ಎಂದು ಹೇಳಿದರು. ಉಜ್ವಲ ಯೋಜನೆ ಮಹಿಳೆಯರ ಜೀವನಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದ್ದರಿಂದ, ಈಗ 200 ರೂ.ಗಳ ಬದಲು, 300 ರೂ.ಗಳ ಸಬ್ಸಿಡಿ ಲಭ್ಯವಿರುತ್ತದೆ. ಈ ಹಿಂದೆ, ಉಜ್ವಲ ಯೋಜನೆಯಡಿ, ಜನರು ಸಿಲಿಂಡರ್ನಲ್ಲಿ 200 ರೂ.ಗಳ ಸಬ್ಸಿಡಿಯನ್ನು ಪಡೆಯುತ್ತಿದ್ದರು ಎಂದರು.
ರಕ್ಷಾಬಂಧನ ಮತ್ತು ಓಣಂ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟವು ಎಲ್ಪಿಜಿಯಲ್ಲಿ 200 ರೂ.ಗಳ ಕಡಿತವನ್ನು ಘೋಷಿಸಿತ್ತು.
ತೆಲಂಗಾಣ ರಾಜ್ಯದಲ್ಲಿ ಸಮ್ಮಕ್ಕ ಸಾರಕ್ಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆ, 2009 ರ ತಿದ್ದುಪಡಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.