Sunday, October 1, 2023

Latest Posts

ಗುಡ್ ನ್ಯೂಸ್: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ಗೃಹಬಳಕೆಯ 14 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ೨೦೦ ರೂಪಾಯಿ ಸಬ್ಸಿಡಿ ಘೋಷಣೆ ಮಾಡಲಾಗಿದ್ದು, ಇದೀಗ ವಾಣಿಜ್ಯ ಬಳಕೆಯ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ದರವನ್ನೂ ಇಳಿಕೆ ಮಾಡಲಾಗಿದೆ.

ಎಲ್‌ಪಿಜಿ ಗ್ರಾಹಕರಿಗೆ ಪ್ರಮುಖ ಪರಿಹಾರವಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು 10 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 158 ರೂಪಾಯಿಯಷ್ಟು ಕಡಿತಗೊಳಿಸಿದೆ.

ಇಂದಿನಿಂದಲೇ ಹೊಸ ಬೆಲೆ ಜಾರಿಗೆ ಬರಲಿದ್ದು, ಸಿಲಿಂಡರ್‌ನ ಚಿಲ್ಲರೆ ಮಾರಾಟದ ಬೆಲೆ 1,522ರೂಪಾಯಿ ಆಗಿದೆ. ರಕ್ಷಾ ಬಂಧನದ ಮುನ್ನಾದಿನದಂದು ದೇಶೀಯ ಎಲ್‌ಪಿಜಿ ಬೆಲೆಯನ್ನು 200 ರೂಪಾಯಿ ಕಡಿತಗೊಳಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!