September 23, 2026
Wednesday, September 23, 2026
spot_img

ಗುಡ್‌ನ್ಯೂಸ್‌, ಗುಡ್‌ನ್ಯೂಸ್‌, ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ಡಿಸ್ಕೌಂಟ್ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಯ ಫೈನ್‌ ಬಾಕಿ ಉಳಿಸಿಕೊಂಡವರಿಗೆ ಇದೀಗ ಗುಡ್‌ನ್ಯೂಸ್‌ ಸಿಕ್ಕಿದ್ದು, ಮತ್ತೊಮ್ಮೆ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50 ರಷ್ಟು ರಿಯಾಯಿತಿ ಘೋಷಿಸಿ ಆದೇಶ ನೀಡಲಾಗಿದೆ.

ಈ ಹಿಂದೆಯೂ ಶೇ. 50ರಷ್ಟು ರಿಯಾಯಿತಿ ನೀಡಿ ಭಾರೀ ಮೊತ್ತದ ದಂಡವನ್ನು ಸರ್ಕಾರ ಸಂಗ್ರಹಿಸಿತ್ತು. ಇದೀಗ ಮತ್ತೆ ಅದೇ ರೀತಿಯ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಜೂನ್ 21 ರಿಂದ ಜುಲೈ 10ರವರೆಗೆ ದಂಡದ ಅರ್ಧದಷ್ಟು ಹಣ ಪಾವತಿಸಲು ವಾಹನ ಸವಾರರಿಗೆ 20 ದಿನಗಳ ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್‌ ಅಧಿಕೃತ ಆದೇಶ ಹೊರಡಿಸಿದ್ದು, ಸಾರಿಗೆ ಇಲಾಖೆಯಲ್ಲಿ 1991 ರಿಂದ 2022ರ ಅವಧಿಯಲ್ಲಿ ಪ್ರಕರಣ ದಾಖಲಾಗಿ ದಂಡ ಬಾಕಿ ಉಳಿಸಿಕೊಂಡಿರುವವರು ಶೇ. 50 ರಷ್ಟು ದಂಡ ಪಾವತಿ ಮಾಡಿ, ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !