October 9, 2026
Friday, October 9, 2026
spot_img

ಶುಭರಾತ್ರಿ: ಅಂತೂ ಈ ದಿನ ಮುಗಿತು.. ಎಲ್ಲ ಚಿಂತೆ ಬದಿಗಿಟ್ಟು ಆರಾಮಾಗಿ ಮಲಗಿ!

ಪ್ರತಿಯೊಬ್ಬರ ಜೀವನದಲ್ಲೂ ಪ್ರತಿಯೊಂದು ದಿನವೂ ಒಂದಲ್ಲ ಒಂದು ಸವಾಲನ್ನು ಹೊತ್ತು ತರುತ್ತದೆ. ಕೆಲವೊಮ್ಮೆ ದಿನ ಅಂದುಕೊಂಡಂತೆ ನಡೆಯುತ್ತದೆ, ಇನ್ನು ಕೆಲವೊಮ್ಮೆ ಮನಸ್ಸಿಗೆ ಅಸಮಾಧಾನ ತರುತ್ತದೆ. ಆದರೆ, ರಾತ್ರಿಯ ಕತ್ತಲು ಆವರಿಸುತ್ತಿದ್ದಂತೆ ನಾವು ಅರಿಯಬೇಕಾದ ಒಂದು ದೊಡ್ಡ ಸತ್ಯವಿದೆ “ಈ ದಿನ ಮುಗಿಯಿತು.”

ಇಡೀ ದಿನ ಏನೇ ನಡೆದಿದ್ದರೂ, ಸರಿ ಅಥವಾ ತಪ್ಪು, ಗೆಲುವು ಅಥವಾ ಸೋಲು, ಅವೆಲ್ಲವೂ ಈಗ ಇತಿಹಾಸ. ಆಗಿ ಹೋದ ಘಟನೆಗಳನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಿದ್ದಾಗ, ನೆಮ್ಮದಿಯಾಗಿ ಮಲಗಬೇಕಾದ ವೇಳೆಯಲ್ಲೂ ಆ ಚಿಂತೆಗಳನ್ನು ತಲೆಯೊಳಗೆ ಇಟ್ಟುಕೊಂಡು ಒದ್ದಾಡುವುದು ಎಷ್ಟು ಸರಿ?

ನಾಳೆಯ ಸವಾಲುಗಳನ್ನು ಎದುರಿಸಲು ಇಂದಿನ ನೆಮ್ಮದಿಯ ನಿದ್ರೆ ಅತ್ಯಗತ್ಯ. ಕಣ್ಣು ಮುಚ್ಚುವ ಮುನ್ನ ಎಲ್ಲ ಯೋಚನೆಗಳನ್ನು ಬದಿಗಿಟ್ಟು, ಮನಸ್ಸನ್ನು ಹಗುರ ಮಾಡಿಕೊಳ್ಳಿ. ಚಿಂತೆಗಳನ್ನು ಬದಿಗಿಟ್ಟು ಪ್ರಶಾಂತವಾಗಿ ಕಣ್ಣು ಮುಚ್ಚಿ. ಶುಭ ರಾತ್ರಿ, ಸವಿನಿದ್ರೆ ನಿಮ್ಮದಾಗಲಿ.

Must Read