ಬೈಕಿಗೆ ಗೂಡ್ಸ್ ರಿಕ್ಷಾ ಡಿಕ್ಕಿ: ಪೊಲೀಸ್ ಸಿಬ್ಬಂದಿಗಳಿಬ್ಬರಿಗೆ ತೀವ್ರ ಗಾಯ

ಹೊಸ ದಿಗಂತ ವರದಿ , ಅಂಕೋಲಾ:

ಬೈಕಿಗೆ ಗೂಡ್ಸ್ ರಿಕ್ಷಾ ಡಿಕ್ಕಿ ಹೊಡೆದು ಪೊಲೀಸ್ ಸಿಬ್ಬಂದಿಗಳಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಬಸ್ ನಿಲ್ದಾಣದ ಎದುರು ಸಂಭವಿಸಿದ್ದು ಅಪಘಾತ ಪಡಿಸಿದ ಗೂಡ್ಸ್ ರಿಕ್ಷಾ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ.

ಕರ್ತವ್ಯದ ನಿಮಿತ್ತ ತೆರಳಿದ್ದ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಮತ್ತು ಹವಲ್ದಾರ ಅಪಘಾತದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ಸಿಬ್ಬಂದಿಗಳು ದಿನಕರ ದೇಸಾಯಿ ಮಾರ್ಗದಲ್ಲಿ ಕುಮಟಾ ಕಡೆಯಿಂದ ಅಂಕೋಲಾ ಪೊಲೀಸ್ ಠಾಣೆ ಕಡೆಗೆ ಬೈಕಿನಲ್ಲಿ ಹೊರಟ ಸಂದರ್ಭದಲ್ಲಿ ಕಿತ್ತೂರು ಚೆನ್ನಮ್ಮ ರಸ್ತೆಯಿಂದ ಅತಿ ವೇಗದಲ್ಲಿ ಬಂದ ಗೂಡ್ಸ್ ರಿಕ್ಷಾ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ರಸ್ತೆಯಲ್ಲಿ ಬಿದ್ದಿದ್ದು ಪಕ್ಕದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಓಡಿ ಬಂದು ಅವರನ್ನು ಎತ್ತಿ ಆರೋಗ್ಯ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಪಡಿಸಿದ ಕೆ.ಎ 30 ಎ3174 ನೋಂದಣಿ ಸಂಖ್ಯೆಯ ಗೂಡ್ಸ್ ರಿಕ್ಷಾ ಚಾಲಕ ತನ್ನ ವಾಹನವನ್ನು ಮುಂದೆ ನಿಲ್ಲಿಸುವ ನೆಪದಲ್ಲಿ ಅಲ್ಲಿಂದ ವಾಹನ ಸಮೇತ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.

ವಿಚಾರಣೆ ನಡೆಸಿದಾಗ ವಾಹನ ಕಾರವಾರದ ವ್ಯಕ್ತಿಯೋರ್ವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ ಎನ್ನಲಾಗುತ್ತಿದೆ.
ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!