ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ರತ್ನಲಮ್ ಬಳಿ ಡೀಸೆಲ್ ತುಂಬಿಕೊಂಡು ಹೊರಟಿದ್ದ ಗೂಡ್ಸ್ ರೈಲು ಏಕಾಏಕಿ ಹಳಿ ತಪ್ಪಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಲೋಕೋ ಪೈಲೆಟ್ ಸೇರಿದಂತೆ ಸಿಬ್ಬಂದಿಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಆದರೆ ಇತ್ತ ಡೀಸೆಲ್ ತುಂಬಿದ ರೈಲು ಹಳ್ಳಿ ತಪ್ಪಿದೆ ಅನ್ನೋ ಮಾಹಿತಿ ಸಿಗುತ್ತಿದ್ದಂತೆ ಜನರು ಬಕೆಟ್, ಕ್ಯಾನ್ ಹಿಡಿದು ಜನರು ಸ್ಥಳಕ್ಕೆ ಓಡೋಡಿ ಬಂದು ರೈಲಿನಲ್ಲಿದ್ದ ಡೀಸೆಲ್ ಆನ್ ಎಸ್ಕೇಪ್ ಮಾಡಿದ್ದಾರೆ.
ರಾಜ್‌ಕೋಟ್‌ನಿಂದ ಭೋಪಾಲ್ ಬಳಿ ಇರುವ ಬಕಿನಾ ಬಹೌರಿಗೆ ಡೀಸೆಲ್ ಸರಬರಾಜು ಹೊಸದೇನಲ್ಲ. ಬಗೌರಿಯ ತೈಲ ಘಟಕದಲ್ಲಿ ಡೀಸೆಲ್ ಶೇಖರಿಸಲಾಗುತ್ತದೆ. ಹೀಗೆ ಗುರುವಾರ ರಾತ್ರಿ ಡೀಸೆಲ್ ತುಂಬಿದ ರೈಲು ರಾಜ್‌ಕೋಟ್‌ನಿಂದ ಪ್ರಯಾಣ ಆರಂಭಿಸಿತ್ತು. ಮಧ್ಯಪ್ರದೇಶದ ರತ್ನಲಮ್ ಬಳಿ ಬರುತ್ತಿದ್ದಂತೆ ರೈಲು ಹಳಿ ತಪ್ಪಿದೆ.
ಘಟನೆ ಸಂಭವಿಸಿದ ಕೆಲ ಹೊತ್ತಲ್ಲೇ ರೈಲು ಅಧಿಕಾರಿಗಳಿಗೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಮಾರ್ಗದ ಮೂಲಕ ಸಾಗುವ ರೈಲುಗಳನ್ನು ಮಾರ್ಗ ಬದಲಾಯಿಸಲಾಗಿದೆ.ಸ್ಥಳೀಯರು ಸೇರಿದಂತೆ ಹಲವರಿಗೆ ರಾತ್ರಿ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಆಗಮಿಸಿದ ಜನರು ರೈಲಿನಿಂದ ಡೀಸೆಲ್ ಕದಿಯಲು ಆರಂಭಿಸಿದ್ದಾರೆ. ಮೂರು ಗೋಡ್ಸ್ ಬೋಗಿಗಳಲ್ಲಿದ್ದ ಸಂಪೂರ್ಣ ಡೀಸೆಲ್ ಖಾಲಿ ಮಾಡಿದ್ದಾರೆ.
ಬೆಳಗಿನ ಜಾವ ಹಳಿ ತಪ್ಪಿದ ಮತ್ತೊಂದು ಬೋಗಿಯ ಕ್ಯಾಪ್ ತೆರೆದು ಬಿಟ್ಟ ಜನರು, ಚರಂಡಿಯಿಂದ ಡೀಸೆಲ್ ಶೇಖರಿಸಿದ್ದಾರೆ. ಬಕೆಟ್, ಕ್ಯಾನ್ ಹಿಡಿದು ಓಡೋಡಿ ಬಂದ ಜನರು ಕೆಲವೇ ಕ್ಷಣದಲ್ಲಿ ಸಂಪೂರ್ಣ ಡೀಸೆಲ್ ಖಾಲಿ ಮಾಡಿದ್ದರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.