ಗೂಡ್ಸ್ ವಾಹನ ಪಲ್ಟಿ: ಮಹಿಳೆ ಸ್ಥಳದಲ್ಲಿಯೇ ಸಾವು

ಹೊಸದಿಗಂತ ವರದಿ, ವಿಜಯಪುರ:

ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ಬರಟಗಿ ಕ್ರಾಸ್ ಬಳಿ ಭಾನುವಾರ ನಡೆದಿದೆ.

ಮೃತಪಟ್ಟವಳನ್ನು ಹಾಸೀಮಬಿ ಹಕೀಮ (32) ಎಂದು ಗುರುತಿಸಲಾಗಿದೆ.

ಇನ್ನು ಈ ಗೂಡ್ಸ್‌ ವಾಹನದಲ್ಲಿದ್ದ ರೋಹಿತ ಹಾಗೂ ಆಸ್ಮಾಬಿ ಎಂಬವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!