ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ತಲುಪಿದೆ. ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸುಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಮೂಲಕ ಸಂಭ್ರಮಿಸುತ್ತಿದೆ.
ಗೂಗಲ್ ಡೂಡಲ್
ಈ ಐತಿಹಾಸಿಕ ಪಂದ್ಯವನ್ನು ಗೂಗಲ್ ಆಕರ್ಷಕ ಡೂಡಲ್ನೊಂದಿಗೆ ಸಂಭ್ರಮಿಸುತ್ತಿದೆ. ಐಕಾನಿಕ್ ಕ್ರಿಕೆಟ್ ಅಂಶಗಳ ನಡುವೆ ವಿಶ್ವಕಪ್ ಕಣ್ಣಿಗೆ ಕಟ್ಟುವಂತೆ ಗೂಗಲ್ ಡೂಡಲ್ ಗ್ರಾಂಡ್ ಫೈನಲ್ ಪಂದ್ಯದ ಸಾರವನ್ನು ಸೆರೆಹಿಡಿದಿದೆ.
ಗೂಗಲ್ ತನ್ನ ಡೂಡಲ್ ಕುರಿತು, “ಇಂದಿನ ಡೂಡಲ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023 ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಆಚರಿಸುತ್ತಿದೆ” ಎಂದು ಹೇಳಿಕೊಂಡಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಫೈನಲ್ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ.