ಚಿಕನ್‌ಪಾಕ್ಸ್ ಲಸಿಕೆ ಸಂಶೋಧಕ ಡಾ.ಮಿಚಿಯಾಕಿ ಜನ್ಮದಿನಕ್ಕೆ ಗೂಗಲ್‌ನಿಂದ ವಿಶೇಷ ಡೂಡಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕನ್‌ಪಾಕ್ಸ್ ರೋಗದ ವಿರುದ್ಧ ಮೊದಲ ಲಸಿಕೆ ಕಂಡುಹಿಡಿದ ಜಪಾನ್ ವೈರಾಲಜಿಸ್ಟ್ ಡಾ. ಮಿಜಿಯಾಕಿ ತಕಾಹಶಿ ಅವರ ಜನ್ಮದಿನಂದು ಗೂಗಲ್ ವಿಶೇಷ ಡೂಡಲ್ ರಚಿಸಿ ಗೌರವ ಸಲ್ಲಿಸಿದೆ.

ಜಪಾನ್‌ನ ಕಲಾವಿದ ಟಟ್ಸುರೊ ಕಿಯುಚಿ ಈ ಡೂಡಲ್ ಚಿತ್ರಿಸಿದ್ದಾರೆ. ಡಾ. ಮಿಚಿಯಾಕಿ ಅವರು ಸೂಕ್ಷ್ಮ ಅಧ್ಯಯನ ಮಾಡುತ್ತಿರುವುದು ಹಾಗೂ ಮಗುವಿನ ಕೈಗೆ ಬ್ಯಾಂಡ್ ಹಾಕುತ್ತಿರುವುದನ್ನು ಡೂಡಲ್‌ನಲ್ಲಿ ಕಾಣಬಹುದಾಗಿದೆ. 1974ರಲ್ಲಿ ಚಿಕನ್‌ಪಾಕ್ಸ್ ಕಾರಣವಾಗುವ ವರಿಸೆಲ್ಲಾ ವೈರಸ್‌ನ್ನು ತಡೆಗಟ್ಟಲು ಮೊದಲ ಲಸಿಕೆ ಕಂಡುಹಿಡಿದರು. ಇಮ್ಯುನೊಕೊಪ್ರೊಮೈಸ್ಡ್​ ರೋಗಿಗಳನ್ನು ಸಂಶೋಧನೆಗೆ ಒಳಪಡಿಸುವ ಮೂಲಕ ಲಸಿಕೆಯ ಪರಿಣಾಮಕತ್ವವನ್ನು ಸಾಬೀತು ಮಾಡಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!