ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೂಗಲ್ ಮ್ಯಾಪ್ ಎಡವಟ್ಟಿಗೆ ಕೇರಳದಲ್ಲಿ ಮತ್ತೊಂದು ವಾಹನ ಹಳ್ಳಕ್ಕಿಳಿದಿದೆ!
ಮುನ್ನಾರ್ಗೆ ಲೊಕೇಶನ್ ನೀಡಿ ಪ್ರಯಾಣಿಸುತ್ತಿದ್ದ ತೆಲಂಗಾಣ ಮೂಲದ ಇನ್ನೋವಾ ವಾಹನ, ಕಲರಿಕಲ್ ಸ್ಟುಡಿಯೋ ಹೆಲ್ತ್ ಸೆಂಟರ್ ರಸ್ತೆಯ ಕಾಟಾಚಿರ ಜಂಕ್ಷನ್ನ ದಕ್ಷಿಣ ಭಾಗದ ಚೇರ್ತಲ ತಣ್ಣೀರ್ಮುಕ್ಕಂ ರಸ್ತೆಯ ಪಕ್ಕದ ಹಳ್ಳಕ್ಕೆ ನುಗ್ಗಿದೆ. ಪ್ರಯಾಣಿಕರು ಮಧುರೈನಿಂದ ಕೊಲ್ಲಂ ಅಲಪ್ಪುಳ ಮಾರ್ಗವಾಗಿ ಮುನ್ನಾರ್ಗೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇಲ್ಲಿನ ಆರೋಗ್ಯ ಕೇಂದ್ರದ ಬಳಿ ಬಂದಾಗ, ಗೂಗಲ್ ಮ್ಯಾಪ್ ನಿಲುಗಡೆಗೆ ಸೂಚಿಸಿತ್ತು. ಈ ವೇಳೆ ವಾಹನ ತಿರುಗಿಸಲು ಯತ್ನಿಸಿದಾಗ ವಾಹನ ನೇರ ಹಿಂಬದಿಯ ನಾಲೆಗೆ ಬಿದ್ದಿದೆ. ಈ ವೇಳೆ ‘ದಿಕ್ಕು’ ತೋಚದಂತಾದ ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದು, ಸ್ಥಳೀಯರು ಧಾವಿಸಿ ಬಂದು ಇವರನ್ನು ರಕ್ಷಿಸಿದ್ದಾರೆ. ಪ್ರಯಾಣಿಕರು ಹಾಗೂ ವಾಹನಕ್ಕೆ ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.