ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೂಗಲ್ ಮ್ಯಾಪ್ ಫಾಲೋ ಮಾಡುತ್ತಾ ಬಂದ ಕಾರ್‌ಒಂದು ನಿರ್ಮಾಣ ಹಂತದ ಸೇತುವೆ ಮೇಲಿಂದ ಬಿದ್ದಿದೆ. ಪರಿಣಾಮವಾಗಿ ಮೂವರು ಮೃತಪಟ್ಟಿದ್ದಾರೆ.
ಅಂದು ಕಾರಿನ ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸುತ್ತಿದ್ದ, ಜತೆ ಆತನ ಸ್ನೇಹಿತರು ಕೂಡ ಇದ್ದರು. ಗೂಗಲ್ ತೋರಿಸಿದ್ದನ್ನು ನಂಬಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯನ್ನು ಹತ್ತಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಸೇತುವೆ ಕಾಮಗಾರಿ ಅಲ್ಲಿಗೇ ನಿಂತಿದೆ ಅವರಿಗೆ ಇದು ಕಂಡಿಲ್ಲ, ಅಲ್ಲಿಂದ ನೇರವಾಗಿ ಕಾರು ಕೆಳಗಿರುವ ನದಿಗೆ ಬಿದ್ದ ಪರಿಣಾಮ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಬರೇಲಿ ಮತ್ತು ಬುಡೌನ್ ಜಿಲ್ಲೆಗಳ ನಡುವಿನ ಗಡಿಯಲ್ಲಿರುವ ಫರೀದ್‌ಪುರ ಮತ್ತು ದತಗಂಜ್‌ಗೆ ಸಂಪರ್ಕ ಕಲ್ಪಿಸುವ ರಾಮಗಂಗಾ ನದಿಯ ಮೇಲಿನ ಅಪೂರ್ಣ ಸೇತುವೆಯಿಂದ ಕಾರು ಉರುಳಿ ಬಿದ್ದ ಪರಿಣಾಮ ಮೂವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ನಿರ್ಮಾಣ ಹಂತದ ಸೇಲುವೆ ಮೇಲೆ ಬ್ಯಾರಿಕೇಟ್ ಹಾಕದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂವರು ಹರ್ಯಾಣದ ಗುರುಗ್ರಾಮದಿಂದ ಕಾರಿನಲ್ಲಿ ಬರೇಲಿಗೆ ಹೊರಟಿದ್ದರು. ಇಬ್ಬರ ಮೃತದೇಹಗಳ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಖಾಲ್‌ಪುರ ಗ್ರಾಮದ ನಿವಾಸಿಗಳು ನದಿ ದಡಕ್ಕೆ ಭೇಟಿ ನೀಡಿದಾಗ ಕಾರು ಹಳ್ಳದಲ್ಲಿ ಮುಳುಗಿರುವುದು ಬೆಳಕಿಗೆ ಬಂದಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಒಳಗೆ ಮೂವರು ಪ್ರಯಾಣಿಕರ ಶವಗಳನ್ನು ಕಂಡಿದ್ದಾರೆ. ಈ ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.