ಇನ್ಮೇಲೆ ಗೂಗಲ್‌ ಮ್ಯಾಪ್‌ ನಲ್ಲೇ ಟೋಲ್‌ ಎಷ್ಟೆಂದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗೂಗಲ್‌ ಮ್ಯಾಪ್ಸ್‌ ಬಂದ ಮೇಲೆ ಓಡಾಟದ ತಲೆನೋವು ಸುಲಭವಾಗಿದೆ. ಇದೀಗ ಹೊಸ ಅಪ್ಡೇಟ್‌ ಒಂದನ್ನು ಗೂಗಲ್‌ ತರುತ್ತಿದ್ದು ಇನ್ಮೇಲೆ ಪ್ರವಾಸ ಮಾರ್ಗದ ಟೋಲ್‌ ಗಳ ಬೆಲೆಯೂ ಕೂಡ ಲಭ್ಯವಾಗಲಿದೆ. ಅಲ್ಲದೇ ಟೋಲ್‌ ಬೆಲೆಗಳನ್ನು ಗಮನಿಸಿ ಹೆಚ್ಚಿನ ಟೋಲ್‌ ಸುಂಕ ತಪ್ಪಿಸಿ ಕಡಿಮೆ ಬೆಲೆಯಿರುವ ಮಾರ್ಗವನ್ನು ಆಯ್ದುಕೊಳ್ಳಲೂ ಇದು ಸಹಾಯಕವಾಗಲಿದೆ.

ಈ ಹಿಂದೆ ಏಪ್ರಿಲ್‌ ನಲ್ಲಿ ಈ ಥರದ ಸೌಲಭ್ಯವನ್ನು ಯುಎಸ್, ಇಂಡೋನೇಷ್ಯಾ ಮತ್ತು ಜಪಾನ್‌ನಲ್ಲಿಪರಿಚಯಿಸಲಾಗಿತ್ತು. ಪ್ರಸ್ತುತ ಇದನ್ನು ಭಾರತದಲ್ಲಿ ಪರಿಚಯಿಸಲಾಗುತ್ತಿದೆ.

ಈ ಹೊಸ ಅಪ್ಡೇಟ್‌ ಟೋಲ್ ಪಾಸ್ ಅಥವಾ ಇತರ ಪಾವತಿ ವಿಧಾನಗಳನ್ನು ಬಳಸುವ ವೆಚ್ಚ, ವಾರದ ದಿನ ಮತ್ತು ಟೋಲ್‌ಗೆ ಎಷ್ಟು ವೆಚ್ಚವಾಗಬಹುದು ಎಂಬುದನ್ನೆಲ್ಲ ಅಂದಾಜಿಸಿ ನಿಮ್ಮ ಗಮ್ಯಸ್ಥಾನ ತಲುಪಲು ಎಷ್ಟು ವೆಚ್ಚವಾಗಬಹುದು ಎಂದು ಅಂದಾಜಿಸಬಹುದಾಗಿದೆ. “ಸ್ಥಳೀಯ ಟೋಲಿಂಗ್ ಅಧಿಕಾರಿಗಳಿಂದ ವಿಶ್ವಾಸಾರ್ಹ ಮಾಹಿತಿಯನ್ನು ಆಧರಿಸಿ ಇದು ಕಾರ್ಯನಿರ್ವಹಿಸುತ್ತದೆ” ಎಂದು ಗೂಗಲ್‌ ಹೇಳಿದೆ. ಇದು ಟೋಲ್-ಫ್ರೀ ಮಾರ್ಗಗಳನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಅದರ ಆಧಾರದ ಮೇಲೆ, ನೀವು  ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!